ಗದಗ: ಜಿಲ್ಲೆಯ ಹಳ್ಳಿಗುಡಿ ರೈಲ್ವೆ ನಿಲ್ದಾಣವನ್ನು ಪುನಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಒತ್ತಾಯಿಸಿದೆ.
ಈ ಕುರಿತು ಸ್ಥಳೀಯ ಗದಗ ರೈಲ್ವೆ ಜಂಕ್ಷನ್ ಅಧಿಕಾರಿಗಳ ಮೂಲಕ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿ, ಈ ಹಿಂದೆ ಗದಗ- ಕೊಪ್ಪಳ ರೈಲ್ವೆ ಮಾರ್ಗದ ಬ್ರಾಡ್‌ಗೇಜ್ ನಿರ್ಮಾಣದ ವೇಳೆ ಹಳ್ಳಿಗುಡಿ ರೈಲ್ವೆ ನಿಲ್ದಾಣ ತೆರವುಗೊಳಿಸಲಾಗಿತ್ತು. ಆ ನಂತರ ಅಧಿಕಾರಿಗಳು ರೈಲ್ವೆ ನಿಲ್ದಾಣವನ್ನು ಪುನರ್ ನಿರ್ಮಿಸುವ ಭರವಸೆ ನೀಡಿದ್ದರೂ, ಅದು ಸಾಕಾರಗೊಂಡಿಲ್ಲ.
ಇದರಿಂದಾಗಿ ಹಳ್ಳಿಗುಡಿ ಸುತ್ತಲಿನ ಹಳ್ಳಿಗುಡಿ, ಹರ್ಲಾಪುರ, ಲಕ್ಕುಂಡಿ ಹಾಗೂ ತಿಮ್ಮಾಪುರ ಮತ್ತಿತರೆ ಗ್ರಾಮಗಳ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಈ ಭಾಗದ ರೈಲ್ವೆ ಪ್ರಯಾಣಿಕರು ದೂರದ ಊರುಗಳಿಗೆ ತೆರಳು 20-30 ಕಿಮೀ ದೂರದಲ್ಲಿರುವ ಗದಗ ನಗರಕ್ಕೆ ತೆರಳುವಂತಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಮದ ಹಾದಿಯಾಗಿ ರೈಲ್ವೆ ಮಾರ್ಗ ಸಾಗಿದ್ದು, ಹಳ್ಳಿಗುಡಿಯಲ್ಲಿ ರೈಲು ನಿಲ್ದಾಣ ಆರಂಭಿಸುವುದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರವೇ ಅಧ್ಯಕ್ಷ ದಾವಲಸಾಬ ಆರ್.ಮುಳಗುಂದ, ಜಿಲ್ಲಾ ಖಜಾಂಚಿ ವೆಂಕಟೇಶ ಬೇಲೂರ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಗದಗ ತಾಲೂಕು ಅಧ್ಯಕ್ಷ ಖಲಂದರ ಹರ್ಲಾಪುರ, ಶಿರಹಟ್ಟಿ ತಾಲೂಕಾಧ್ಯಕ್ಷ ರಫೀಕ ಕೆರೆಮನಿ, ಮುಂಡರಗಿ ತಾಲೂಕಾಧ್ಯಕ್ಷ ಸಿದ್ದಪ್ಪ ಮುದ್ಲಾಪುರ, ಗೌರಾಧ್ಯಕ್ಷ ಉಮೇಶ ಚನ್ನಳ್ಳಿ, ನರಗುಂದ ತಾಲೂಕಾಧ್ಯಕ್ಷ ಹನಮಂತ ಮಜ್ಜಿಗುಡ್ಡ, ಜಿಲ್ಲಾ ಸಹ ಕಾರ್ಯದರ್ಶಿ ಸಹದೇವ ಕೋಟಿ, ಮಹೇಶ ಲಿಂಗಶೆಟ್ಟಿ, ಮರಿಗಾಳೆಪ್ಪ ಪೂಜಾರ, ಅಬ್ದುಲ್ ಬೇಲೇರಿ, ರಾಜೇಸಾಬ ಗಡಾದ, ಮಹ್ಮದ ನಾರಾಯಣಕೇರಿ, ಬಸವರಾಜ ಎಸ್. ಬೇವೂರ, ಉಮೇಶ ಚನ್ನಳ್ಳಿ, ಚಂಬಣ್ಣ ಬೇವೂರ, ಉಮೇಶ ಲಿಂಗಶೆಟ್ಟರ, ಹೊಳಿಯಪ್ಪ ಜಂಬಣ್ಣವರ, ಅಬ್ದುಲ್ಸಾಬ ದೊಡ್ಡಮನಿ, ಮಂಜು ಕಟ್ಟಿಮನಿ, ಮಣಿಕಂಠ ಭಂಡಾರಿ, ಶಬ್ಬೀರ ಈಟಿ, ಮಲ್ಲೇಶ ಪಲ್ಲೇದ, ಮಾಬುಸಾಬ ಹುಬ್ಬಳ್ಳಿ, ಲಕ್ಷ್ಮಣ ಬೆಟಗೇರಿ, ಮುತ್ತು ಕೊಪ್ಪರದ, ರವಿ ತಟ್ಟಿ, ಗೌಸ ಕಲಾವಂತ, ಖಾದರ ಟಪಾಲಜಿ, ದೇವಪ್ಪ ಬಟ್ಟೂರ, ಕಲಾವತಿ ನಾವಿ ಮತ್ತಿತರರು ಇದ್ದರು.