ಮಾಗಡಿ: ರೈತರ ಬೆಳೆದಿರುವ ರಾಗಿಯನ್ನು ಖರೀದಿ ಮಾಡಬೇಕು. ಸರ್ಕಾರ ಸಣ್ಣ, ದೊಡ್ಡ ರೈತರೆಂದು ತಾರತಮ್ಯ ಮಾಡಬಾರದು ಎಂದು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್ ನೇತೃತ್ವದಲ್ಲಿ ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಸೋಮೇಶ್ವರಸ್ವಾಮಿ ವೃತ್ತದಲ್ಲಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ಬೆಂಬಲ ಬೆಲೆಗೆ ರಾಗಿಖರೀದಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿ ರಸ್ತೆತಡೆ ಪ್ರತಿಭಟನಾ ಧರಣಿ ನಡೆಸಿದರು. ತಾಲೂಕಿನ ಪ್ರಮುಖ ಬೆಳೆ ರಾಗಿ. ಸರ್ಕಾರಿ ಇಂತಿಷ್ಟು ರಾಗಿ ಖರೀದಿಸಿದ್ದು, ಜ.21ರಿಂದಲೇ ಖರೀದಿ ನಿಲ್ಲಿಸಿದೆ. ಕೂಡಲೆ ಸರ್ಕಾರ ಬೆಂಬಲ ಬೆಲೆಗೆ ರಾಗಿ ಖರೀದಿ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಸಣ್ಣ, ದೊಡ್ಡ ರೈತರೆಂಬ ತಾರತಮ್ಯ ಬಿಡಿ: ಬಹುತೇಕ ರೈತರು ಈಗ ರಾಗಿ ಕಣ ಮಾಡುತ್ತಿ ರುವುದು. ಈ ರೈತರು ಬೆಳೆದ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟಮಾಡಲಾಗದ ಪರಿಸ್ಥಿತಿಯಲಿ Éದ್ದಾರೆ. ಸಣ್ಣ ರೈತರುಬೆಳೆದ ರಾಗಿ ತಮ್ಮ ಕುಟುಂಬಕ್ಕೆ ಇಟ್ಟುಕೊಂಡು ಉಳಿದರಾಗಿಯನ್ನು ಮಾರಾಟ ಮಾಡುತ್ತಾರಷ್ಟೆ. ಆದರೆ ದೊಡ್ಡರೈತರು ಬೆಳೆದ ಅಷ್ಟು ರಾಗಿಯನ್ನು ಅವರೇಊಟಮಾಡಲಾಗು ತ್ತದೆಯೇ ಎಂದು ಪ್ರಶ್ನಿಸಿದ ಅವರು, ದೊಡ್ಡ ರೈತರು ಬೆಳೆದ ರಾಗಿಯನ್ನು ಸಹ ಸರ್ಕಾರಬೆಂಬಲ ಬೆ ಲೆಗೆ ಖರೀದಿಸಬೇಕು. ರಾಗಿ ಖರೀದಿ ವಿಚಾರದಲ್ಲಿ ದೊಡ್ಡ ಮತ್ತು ಸಣ್ಣ ರೈತರೆಂದು ತಾರತಮ್ಯಮಾಡಬಾರದು. ಎಲ್ಲರನ್ನು ರೈತರೆಂದೇ ಪರಿಗಣಿಸಬೇಕು.ಆಕಾಶದ ಮಳೆ, ಭೂಮಿ ಬೆಳೆ ನಂಬಿ ರೈತರು ಬದುಕುಕಟ್ಟಿಕೊಂಡಿರುವುದು. ಪ್ರಕೃತಿ ವಿಕೋಪದಂತಹ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ರಾಗಿ ಖರೀದಿ ವಿಚಾರವಾಗಿ ಸರ್ಕಾರ ಮಧ್ಯ ಪ್ರವೇಶಿರಾಗಿ ಖರೀದಿ ಮಾಡಬೇಕೆಂದು ಒತ್ತಾಯಿಸಿದರು.
ಡೀಸಿಗೆ ಶಿಫಾರಸ್ಸು: ರಸ್ತೆ ತಡೆ ಪ್ರತಿಭಟನಾಕಾರರ ಸ್ಥಳಕ್ಕೆ ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಭೇಟಿ ನೀಡಿ ಮಾತನಾಡಿದ ಅವರು, ರೈತರು ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಶಿಫಾರಸ್ಸುಮಾಡಲಾಗಿದೆ. ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ರೈತರ ರಾಗಿ ಖರೀದಿಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ರೈತರಲ್ಲಿ ವಿಶ್ವಾಸ ಮೂಡಿಸಿದ ಅವರು ಪ್ರತಿಭಟನೆ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.
ಸುಮಾರು ಅರ್ಧಗಂಟೆಗಳ ಕಾಲ ರಸ್ತೆ ತಡೆಯಾಗಿತ್ತು. ಇದರಿಂದ ಸಂಚಾರ ಅಸ್ತವ್ಯಸ್ಥ ಉಂಟಾಗಿತ್ತು. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ಸುಗಮಸಂಚಾರಕ್ಕೆ ಕ್ರಮ ವಹಿಸಿದ್ದರು. ರೈತ ಸಂಘದಕಾರ್ಯದರ್ಶಿ ರವಿ ಕುಮಾರ್, ಹನುಮಂತರಾಯಪ್ಪ,ನಾರಾಯಣಪ್ಪ, ಶಿವಣ್ಣ, ಕುಮಾರ್, ರಮೇಶ್, ಸುರೇಶ್‌ಬುಡಾನ್‌ಸಾಬ್, ಗಂಗಯ್ಯ ಸೇರಿದಂತೆ ನೂರಾರು ರೈತರು ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.