Advertisement

ಪರಿವರ್ತನಾ ಯಾತ್ರೆ ಜವಾಬ್ದಾರಿ ಸ್ಥಳೀಯ ನಾಯಕರಿಗೆ

01:29 PM Dec 23, 2017 | Team Udayavani |

ಹರಪನಹಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಜ.3ರಂದು ಪಟ್ಟಣದಲ್ಲಿ ನಡೆಯುವ ಪರಿವರ್ತನಾ ಯಾತ್ರೆ ಸಂಘಟಿಸುವ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಸ್ಥಳೀಯ ಬಿಜೆಪಿ ಮುಖಂಡರಿಗೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಪಿ.ಮಹಾಬಲೇಶ್ವರೌಡ ತಿಳಿಸಿದರು.

Advertisement

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಸಮಿತಿ ಆದೇಶದಂತೆ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಸಂಸದ ಜಿ.ಎಂ. ಸಿದ್ದೇಶ್ವರ್‌ ಅವರು ನಮಗೆ ಪರಿವರ್ತನಾ ಯಾತ್ರೆಯ ಸಮಾರಂಭವನ್ನು ಸಂಘಟಿಸಿ ಯಶಸ್ವಿಗೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ ಎಂದು ಹೇಳಿದರು. ಪರಿವರ್ತನಾ ಯಾತ್ರೆ ಅಂಗವಾಗಿ ಈಗಾಗಲೇ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್‌ ಸಮಾರಂಭ ಆಯೋಜಿಸಲು ಸ್ಥಳೀಯ ಪೊಲೀಸ್‌ ಇಲಾಖೆಯಿಂದ ಸ್ಥಳ ಹಾಗೂ ಮೈಕ್‌ ಪರವಾನಿಗೆ ತೆಗೆದುಕೊಂಡಿ¨ªೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾತ್ರೆಯನ್ನು ಯಶಸ್ವಿಗೊಳಿಸುತ್ತೇವೆ. ಸುಮಾರು 30-50 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು. ಮುಖಂಡ ಜಿ.ನಂಜನಗೌಡ ಮಾತನಾಡಿ, ಕಳೆದ 10 ವರ್ಷಗಳ ನಂತರ ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ಸಿಕ್ಕಿದೆ. 

ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಥಳೀಯರೇ ಅಭ್ಯರ್ಥಿಯಾಗಬೇಕು ಎಂಬ ಕೂಗಿಗೆ ಸ್ಪಂದನೆ ದೊರೆತಿದೆ. ಪರಿವರ್ತನಾ ಯಾತ್ರೆಯಿಂದ ತಾಲೂಕಿನ ಬಿಜೆಪಿಯಲ್ಲಿಯೂ ಪರಿವರ್ತನೆಯಾಗಲಿವೆ ಎಂದರು. ಮುಖಂಡ ಎನ್‌.ಕೊಟ್ರೇಶ್‌ ಮಾತನಾಡಿ, ಯಡಿಯೂರಪ್ಪನವರ ಜೊತೆ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಎಸ್‌.ಎ.ರವೀಂದ್ರನಾಥ, ಸಂಸದ ಜಿ.ಎಂ. ಸಿ¨ªೇಶ್ವರ, ಮಾಜಿ ಶಾಸಕ ಎಸ್‌.ವಿ. ರಾಮಚಂದ್ರಪ್ಪ, ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಪರಿವರ್ತನಾ ರ್ಯಾಲಿ ಕಾರ್ಯಕ್ರಮ  ನಡೆಯಲಿದ್ದು, ಪಟ್ಟಣದ ಹಿರೆಕೆರೆ ವೃತ್ತದಿಂದ  ಡಾಂಗಣದವರೆಗೆ ಯಡಿಯೂರಪ್ಪ ಹಾಗೂ ಮುಖಂಡರ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮ ನಂತರ ಯಡಿಯೂರಪ್ಪನವರು ಅಂದು ಹರಪನಹಳ್ಳಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಿದರು. ಮುಖಂಡರಾದ ಆರುಂಡಿ ನಾಗರಾಜ್‌, ತಾಪಂ ಸದಸ್ಯರಾದ ವೆಂಕಟೇಶರೆಡ್ಡಿ, ಗಣೇಶ್‌, ಪ್ರಕಾಶ, ಜಿಪಂ ಸದಸ್ಯ ಸಿದ್ದಪ್ಪ, ಮೈದೂರು ರಾಮಪ್ಪ, ಚಿಕ್ಕೇರಿ ವೆಂಕಪ್ಪ, ಎಚ್‌.ಎಂ.ಜಗದೀಶ್‌, ಗುಂಡಗತ್ತಿ ಮಂಜುನಾಥ್‌, ಓಂಕಾರಗೌಡ, ತೆಲಿಗಿ ಮಂಜುನಾಥ್‌, ಎನ್‌.ಹರೀಶ್‌, ತೇಜು ನೀಲಗುಂದ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next