Advertisement

ರಾಜ್ಯದಲ್ಲಿರುವುದು ಸ್ಪಂದನಶೀಲ ಸರಕಾರ: ಸುನಿಲ್‌

01:06 AM Feb 01, 2022 | Team Udayavani |

ಕಾರ್ಕಳ: ಜನರ ಕಷ್ಟ- ನೋವು ಗಳಿಗೆ ಪರಿಹಾರ ಕಂಡು ಕೊಳ್ಳುವ, ಎಲ್ಲ ವರ್ಗದ ಜನರಿಗೆ ಸ್ಪಂದಿಸಿ, ನ್ಯಾಯ ದೊರಕಿಸಿಕೊಡುವ, ಸ್ಪಂದನಶೀಲ ಸರಕಾರ ರಾಜ್ಯದಲ್ಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಅವರು ಸೋಮವಾರ ಕಾರ್ಕಳ ತಾಲೂಕಿನ ವಿವಿಧ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 25 ಕೋ.ರೂ. ಗ‌ಳಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಜನರ ಕಷ್ಟ-ನಷ್ಟಗಳಿಗೆ ಸ್ಪಂದನೆ, ಕೋವಿಡ್‌ ತೀವ್ರತೆ ಸಂದರ್ಭ ಹೆಚ್ಚು ಅನಾಹುತವಾಗದಂತೆ ತಡೆ, ಗ್ರಾಮೀಣ ಭಾಗದಲ್ಲಿ ಬೆಳಕು ಕಾಣದ ಮನೆಗಳಿಗೆ ಬೆಳಕು, ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡ ಬಡವರಿಗೆ ಹಕ್ಕುಪತ್ರ, ಶೈಕ್ಷಣಿಕ, ಕೌಶಲಾಭಿವೃದ್ಧಿ, ಆರ್ಥಿಕ ಪ್ರಗತಿಗೆ ಪೂರಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತ ಜನಪರವಾಗಿ ಕೆಲಸ ಮಾಡುತ್ತಿದೆ. ಅಮೃತ ಯೋಜನೆಯಲ್ಲಿ ಪ್ರತೀ ಗ್ರಾ.ಪಂ.ಗಳ ಅಭಿವೃದ್ಧಿ, ಗ್ರಾಮ ಒನ್‌ ಮೂಲಕ ಸರಕಾರದ ಸವಲತ್ತು ಕಟ್ಟ ಕಡೆಯ ವ್ಯಕ್ತಿಯ ಮನೆ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ:ರಾಜ್ಯಪಾಲರ ಟ್ವಿಟರ್‌ ಖಾತೆ ಬ್ಲಾಕ್‌ ಮಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಕೋಟಿ ಲೆಕ್ಕದಲ್ಲಿ ಅನುದಾನ
ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನಲಕ್ಷ ರೂ. ಮೊತ್ತದಲ್ಲಿ ಅನು ದಾನಗಳು ಅಭಿವೃದ್ಧಿಗೆ ಲಭ್ಯ ವಾಗುತ್ತಿದ್ದವು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೋಟ್ಯಂತರ ರೂ. ರಸ್ತೆ, ಸೇತುವೆ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಿಗೆ ವಿಂಗಡಿಸಿ ನೀಡುತ್ತಿದ್ದು. ರಾಜ್ಯ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಕರಾವಳಿ ಭಾಗಕ್ಕೆ ಮತ್ತಷ್ಟು ಅನುದಾನ ತಂದು ಅವಿಭಜಿತ ಜಿಲ್ಲೆಯನ್ನು ಪ್ರಗತಿಯಲ್ಲಿ ಮುಂಚೂಣಿಗೆ ಕೊಂಡೊಯ್ಯವಲ್ಲಿ ಶ್ರಮಿಸುವುದಾಗಿ ಹೇಳಿದ ಅವರು, ಸ್ವಕ್ಷೇತ್ರ ಕಾರ್ಕಳವನ್ನು ಸಮಗ್ರ ಅಭಿ ವೃದ್ಧಿ ಪಡಿಸುವಲ್ಲಿ ಕೋಟ್ಯಂತರ ಅನು ದಾನದಲ್ಲಿ ಅಭಿವೃದ್ಧಿ ಕೈಗೊಳ್ಳಾಗುತ್ತಿದೆ. ಉಭಯ ಜಿಲ್ಲೆಗಳ ಅಭಿವೃದ್ಧಿಗೂ ಹೆಚ್ಚಿನ ಪ್ರಾಧಾನ್ಯ ನೀಡಲಾಗುವುದು ಎಂದು ತಿಳಿಸಿದರು.

Advertisement

ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಕಾರ್ಯದರ್ಶಿ ನವೀನ್‌ ನಾಯಕ್‌, ಉದಯ ಎಸ್‌. ಕೋಟ್ಯಾನ್‌, ದಿವ್ಯಶ್ರೀ ಗಿರೀಶ್‌ ಅಮೀನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next