ಉಡುಪಿ: ನಾವು ಬಳಕೆದಾರರ ಸಮಸ್ಯೆಗಳನ್ನು ಸಂಘಟನೆಗಳ ಮೂಲಕ ದೂರು ಸಲ್ಲಿಸುವ ವೇಳೆಯಲ್ಲಿ ತಾವು ಕೂಡ ಮತ್ತೋರ್ವ ಬಳಕೆದಾರರಿಗೆ ಪೂರೈಕೆದಾರರು ಮತ್ತು ಆ ಬಳಕೆದಾರರಿಗೆ ಸೂಕ್ತ ನ್ಯಾಯ ಸಲ್ಲಿಸುವ ಜವಾಬ್ದಾರಿ ಓರ್ವ ಪೂರೈಕೆದಾರರಾಗಿ ಹೊಂದಿರಬೇಕು ಎಂಬ ಚಿಂತನೆ ಅಗತ್ಯ ಮಾನವ ಹಕ್ಕುಗಳ ಹೋರಾಟಗಾರ ಡಾ| ರವೀಂದ್ರನಾಥ್ ಶಾನುಭಾಗ್ ಹೇಳಿದರು.
ಉಡುಪಿ ಜಗನ್ನಾಥ ಸಭಾಂಗಣದಲ್ಲಿ ರವಿವಾರ ದ.ಕ. ಮತ್ತು ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಉಡುಪಿ ವಲಯ ಇದರ ಸಮಾವೇಶ ಮತ್ತು ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡುಗಳನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಸಮಾವೇಶದಲ್ಲಿ 127 ಸದಸ್ಯರಿಗೆ ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಯಿತು.
ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರೋಷನ್ ಕರ್ಕಡ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾಗ್ಯಾರೇಜ್ ಮಾಲಕರ ಸಂಘ ಮಂಗಳೂರು ಮತ್ತು ಉಡುಪಿ ಇದರ ಅಧ್ಯಕ್ಷ ಗುಣಪಾಲ್, ಉಪಾಧ್ಯಕ್ಷ ಉದಯ ಕಿರಣ್, ನಿರ್ದೇಶಕ ಜನಾದìನ್, ವಿಮಾನಿರೀಕ್ಷಕ ನವೀನ, ಕಾರ್ಮಿಕ ನಿರೀಕ್ಷಕರಾದ ರವಿಕುಮಾರ್, ಪ್ರವೀಣ್ ಕುಮಾರ್, ಸಂಸ್ಥೆಯ ಕೋಶಾಧಿಕಾರಿ ಸಂತೋಷ್ ಕುಮಾರ್, ಉಪಾಧ್ಯಕ್ಷ ವಿನಯ ಕುಮಾರ್, ರಾಜೇಶ್ ಜತ್ತನ್, ಗೌರವ ಸಲಹೆಗಾರ ಪ್ರಭಾಕರ್ ಕೆ., ವಿಲ್ಸನ್ ಅಂಚನ್,ಯಾದವ ಶೆಟ್ಟಿಗಾರ್, ಜಯ ಸುವರ್ಣ, ಜೊತೆ ಕಾರ್ಯದರ್ಶಿಗಳಾದ ಪ್ರಶಾಂತ್ ಮೆಂಡನ್, ರವೀಂದ್ರ ಶೇಟ್, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಉಪಸ್ಥಿತರಿದ್ದರು. ಪ್ರವೀಣ್ ಕುಮಾರ್ ಮತ್ತು ಮಂಜುನಾಥ್ ಮಣಿಪಾಲ ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು.