Advertisement

ಕಾಡು, ಕಾಡು ಪ್ರಾಣಿಗಳ ಸಂರಕ್ಷಣೆ ನಾಗರಿಕರ ಜವಾಬ್ದಾರಿ

07:20 AM Feb 03, 2019 | |

ಆನೇಕಲ್‌: ಕಾಡು, ಕಾಡು ಪ್ರಾಣಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಬೇಕು. ಅಲ್ಲದೇ, ಅದು ನಮ್ಮ ಹಕ್ಕು ಎಂದು ಭಾವಿಸಬೇಕು. ಆಗ ಮಾತ್ರ ಅರಣ್ಯ ಉಳಿಯುತ್ತದೆ ಎಂದು ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್‌ ಎನ್‌.ಬನ್ನೇರುಘಟ್ಟ ಹೇಳಿದರು.

Advertisement

ತಾಲೂಕಿನ ಶಾನುಭೋಗನಹಳ್ಳಿಯಲ್ಲಿ ಗ್ರಾಮ ಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ಸಂಯುಕ್ತಾ ಶ್ರಯದಲ್ಲಿ ಕಾಡ್ಗಿಚ್ಚಿನ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಮೂಡಿಸುವ ಜಾಥಾದಲ್ಲಿ ಅವರು ಮಾತನಾಡಿದರು.

ಅರಣ್ಯ ನಾಶದಿಂದ ಆಪತ್ತು: ಮನುಷ್ಯ ನೆಮ್ಮದಿ ಯಾಗಿ ಬದುಕಬೇಕಾದರೆ ಅರಣ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಅರಣ್ಯಗಳನ್ನು ನಾವು ನಾಶ ಮಾಡುತ್ತ ಬಂದಿದ್ದೇವೆ. ಅದರಿಂದಲೇ ಇಂದು ಕಾಲಕ್ಕೆ ತಕ್ಕಂತೆ ಮಳೆ ಆಗುತ್ತಿಲ್ಲ. ಮೃಗ ಮಾನವರ ಸಂಘರ್ಷ ಮಿತಿ ಮೀರುತ್ತಿದೆ. ಹಾಗಾಗಿ, ಇಂದಾದರೂ ಅರಣ್ಯಗಳ ಅವಶ್ಯಕತೆ ಬಗ್ಗೆ ನಾಗರಿಕರು ಅರಿಯಬೇಕಿದೆ ಎಂದು ಹೇಳಿದರು.

ಕಾಡಿನ ಮೊದಲ ಶತ್ರು ಕಾಡ್ಗಿಚ್ಚು: ಕಾಡಿನ ಮೊದಲ ಶತ್ರು ಕಾಡ್ಗಿಚ್ಚು. ಹಾಗಾಗಿ, ಕಾಡ್ಗಿಚ್ಚಿನಿಂದ ಕಾಡುಗಳನ್ನು ರಕ್ಷಿಸಬೇಕಾದರೆ ಜನರಲ್ಲಿ ಅದರಲ್ಲೂ ಕಾಡಂಚಿನ ಹಳ್ಳಿಗರಲ್ಲಿ ಜಾಗೃತಿ ಮೂಡಿಸು ವುದೊಂದೇ ದಾರಿ. ಆ ಕಾರಣದಿಂದ ನಮ್ಮ ಸಂಸ್ಥೆ ಕಾಡಂಚಿನ ಹಳ್ಳಿಗರಲ್ಲಿ ಕಾಡಿನ ಪ್ರಾಮುಖ್ಯತೆ, ಕಾಡಿನಲ್ಲಿ ಕಾಣಿಸಿಕೊಳ್ಳುವ ಬೆಂಕಿಗೆ ಕಾರಣ ಗಳೇನು?, ಕಾಡ್ಗಿಚ್ಚಿನಿಂದ ಕಾಡನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ನಾಟದ ಮೂಲಕ ಅರಿವು ಮೂಡಿಸುತ್ತಿದ್ದೇವೆ ಎಂದರು.

ಪ್ರತಿ ವರ್ಷ ನಮ್ಮ ತಂಡ ಅರಣ್ಯ ಇಲಾಖೆ ಯೊಂದಿಗೆ ಸೇರಿ ಕಾಡಂಚಿನ ಹಳ್ಳಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿದೆ. ಇದಲ್ಲದೇ, ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲೂ ಸಹ ವನ್ಯಜೀವಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

8 ಜನರ ತಂಡ 30 ನಿಮಿಷಗಳ ಕಾಲ ನಾಟಕದ ಮೂಲಕ ಜಾಗೃತಿ ಪ್ರದರ್ಶನ ನೀಡಿತು. ಬ್ಯಾಟರಾಯನದೊಡ್ಡಿ, ತಟ್ಟುಗುಪ್ಪೆ, ವೀವರ್ ಕಾಲೋನಿ ಶಾಲೆ ಹೀಗೆ ಹಲವು ಹಳ್ಳಿಗಳು ಮತ್ತು ಶಾಲೆಗಳಲ್ಲಿ ನಾಟಕ ಪ್ರದರ್ಶನ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಬಿ.ಗೌಡ, ಅರಣ್ಯ ಇಲಾಖೆ ಉಪ ವಲಯ ಅರಣ್ಯಾ ಧಿಕಾರಿಗಳಾದ ಮಹೇಶ್‌, ಆಶಾ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next