Advertisement
ಇದರ ಮೊದಲ ಹೆಜ್ಜೆ ಎಂಬಂತೆ ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಬಿಹಾರ ಜನ ಸಂವಾದ್’ ಹೆಸರಿನ ವರ್ಚುವಲ್ ರ‌್ಯಾಲಿಗೆ ಚಾಲನೆ ನೀಡಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಮತ್ತು ಅವರನ್ನು ಅವರ ಊರುಗಳಿಗೆ ತಲುಪಿಸಲು ಮೋದಿ ಸರಕಾರ ಎಲ್ಲ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದರು. ದೇಶದ ವಿವಿಧೆಡೆ ಕೆಲಸ ಮಾಡುವ ವಲಸಿಗ ಕಾರ್ಮಿಕರಲ್ಲಿ ಬಿಹಾರಿಗಳೇ ಅಧಿಕ ಇರುವ ಹಿನ್ನೆಲೆಯಲ್ಲಿ ಶಾ ಮಾತು ಮಹತ್ವ ಹೊಂದಿದೆ.
ಕೋವಿಡ್-19 ಈ ಬಿಕ್ಕಟ್ಟಿನ ಸಂದರ್ಭದಲ್ಲೂ ಬಿಹಾರದ ಎಲ್ಲ ಜನತೆಯನ್ನು ತಲುಪಲು ಬಿಜೆಪಿ ನಿರ್ಧರಿಸಿದೆ. “ಆತ್ಮನಿರ್ಭರ ಭಾರತ ಪರಿಕಲ್ಪನೆ’ಯ ಆಧಾರದಲ್ಲಿ ಜನರೊಂದಿಗೆ ಬೆಸೆದುಕೊಳ್ಳಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಸುಮಾರು 75 ಡಿಜಿಟಲ್ ರ‌್ಯಾಲಿಯನ್ನು ನಡೆಸಲಿದೆ ಎಂದರು.
Related Articles
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದು, ನಿತೀಶ್ ಆಡಳಿತ ವೈಖರಿ ವಿರುದ್ಧ ಸಿಟ್ಟಿಗೆದ್ದಿರುವ ಎನ್‌ಡಿಎ ಅಂಗಪಕ್ಷ ಲೋಕ ಜನಶಕ್ತಿ ಪಾರ್ಟಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
Advertisement
ವಿಶ್ವದ ಅತೀ ದೊಡ್ಡ ವರ್ಚುವಲ್ ರ್ಯಾಲಿದೇಶಕ್ಕೇ ಮೊದಲ ಈ ವರ್ಚುವಲ್ ರ‌್ಯಾಲಿಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದ್ದು, ಇದು ವಿಶ್ವದಲ್ಲೇ ಅತೀ ದೊಡ್ಡದು. ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಮಿತ್ ಶಾ, ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭಾಗಿಯಾಗಿ
ದ್ದರು. ಶಾ ಭಾಷಣವನ್ನು ಬಿಹಾರದ 243 ವಿಧಾನಸಭೆ ಕ್ಷೇತ್ರಗಳಲ್ಲಿ ಡಿಜಿಟಲ್ ಸ್ಕ್ರೀನ್‌ಗಳಲ್ಲಿ ನೇರ ಪ್ರದರ್ಶನ ಮಾಡಲಾಯಿತು.