ಬೆಳ್ತಂಗಡಿ: ಯುವ ಸಮುದಾಯ ವನ್ನು ಒಗ್ಗೂಡಿಸಿದ ಬಿರುವೆರ್ ಕುಡ್ಲ ತಂಡ ಸಮಾಜದ ಕಡುಬಡವರ ಕಷ್ಟಗಳಿಗೆ ಸ್ಪಂದಿಸು ತ್ತಿರುವ ಕೆಲಸ ಪ್ರಶಂಸನೀಯ ಎಂದು ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ಹೇಳಿದರು.
ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ವತಿಯಿಂದ ರವಿವಾರ ಸರಕಾರಿ ಮಾದರಿ ಶಾಲೆ ವಠಾರದಲ್ಲಿ ಹಮ್ಮಿಕೊಂಡ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ ಅವರು ಉದ್ಘಾಟಿಸಿ, ಸಮಾಜದ ಎಲ್ಲ ಸಮುದಾಯದವರು ಶಿಬಿರದ ಪ್ರಯೋಜನ ಪಡೆಯುವಂತಾಗಲಿ ಎಂದು ಹಾರೈಸಿದರು.
ಮಾಜಿ. ಜಿ.ಪಂ. ಸದಸ್ಯ ಶೈಲೇಶ್ ಕುಮಾರ್ ಮಾತನಾಡಿ, ನಾರಾಯಣಗುರು ತತ್ತÌದಂತೆ ಆರೋಗ್ಯ ದೃಷ್ಟಿಯಿಂದ ಅಸಹಾಯಕರಿಗೆ ನೆರವು ನೀಡಬೇಕಿರುವುದು ನಮ್ಮ ಕರ್ತವ್ಯ. ಜಾತಿ, ಮತ ಭೇದವಿಲ್ಲದೆ ಎಲ್ಲರ ಸೇವೆ ನಿರಂತರವಾಗಿ ಸಾಗಲಿ ಎಂದು ಹೇಳಿದರು.
ಶಿಕ್ಷಕ ಕೇಶವ ಬಂಗೇರ ಮಾತನಾಡಿ, ಆರೋಗ್ಯ ಶಿಬಿರಗಳು ಹಳ್ಳಿಗಳಿಗೆ ಅವಶ್ಯ ವಿದೆ ಎಂಬುದನ್ನು ಅರಿತು ಬಿರುವೆರ್ ಕುಡ್ಲ ನೀಡುತ್ತಿರುವ ಸೇವೆ ಉತ್ತಮ. ಗ್ರಾಮೀಣರು ತಮ್ಮ ಆರೋಗ್ಯ ಸಮಸ್ಯೆಯನ್ನು ವೈದ್ಯ ರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗ ಲಿದೆ. ನಾರಾಯಣಗುರು ಸಂದೇಶದಂತೆ ಸಾಮಾಜಿಕ ಜಾಗೃತಿ ಮೈಗೂಡಿಸಿಕೊಂಡು ಹಮ್ಮಿಕೊಂಡ ಈ ಶಿಬಿರದ ಲಾಭ ಎಲ್ಲರಿಗೂ ಸಿಗಲಿ ಎಂದರು.
ಬಿರುವೆರ್ ಕುಡ್ಲ ಬೆಳಂಗಡಿ ಘಟಕದ ಗೌರವ ಸಲಹೆಗಾರ ಸಂಪತ್ ಬಿ. ಸುವರ್ಣ, ಸಂಘದ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಯೇನಪೊಯಾ ವೈದ್ಯರಾದ ಡಾ| ಭರತ್, ಡಾ| ಅಜೀಜ್, ಡಾ| ತನೀÌರ್ ಮತ್ತಿತರರು ಉಪಸ್ಥಿತರಿದ್ದರು.ವಿನೋದ್ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಶಿಬಿರದಲ್ಲಿ ದಂತ ತಪಾಸಣೆ-ಚಿಕಿತ್ಸೆ, ನೇತ್ರ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಸ್ತ್ರೀರೋಗ ಸಮಸ್ಯೆ, ರಕ್ತ ದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ಮಾಡಿಸಲಾಯಿತು. ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.