ಚಿಕ್ಕಬಳ್ಳಾಪುರ: ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡ ಬೇಕು. ಕಷ್ಟವನ್ನು ಅರಿಯಬೇಕು, ಸೂಕ್ತವಾಗಿ ಸ್ಪಂದಿಸಿ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತು ವಾರಿ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.
ಜಿಲ್ಲೆಯಲ್ಲಿ “ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಅನೇಕ ಕ್ರಮ ಕೈಗೊಂಡಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ರುವ ಪ್ರಾಥಮಿಕ ಆರೋಗ್ಯಕೇಂದ್ರಗಳ ಅಭಿವೃದ್ಧಿಗೆ ವಿಶೇಷಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಗುಣ ಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಮ್ಮ ಕರ್ತವ್ಯ. ಆಸ್ಪತ್ರೆಗಳ ವೈದ್ಯರು ಮತ್ತು ಇಲಾಖೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆ ಪರಿಹರಿ ಸಲುವಿಶೇಷಆದ್ಯತೆ ನೀಡಬೇಕೆಂದು ಸೂಚಿಸಿದರು.
ಆಧ್ಯಾತ್ಮ ಚಿಂತಕರಾದ ಇಶಾ ಫೌಂಡೇಷನ್‌ನ ವಾಸುದೇವ್ ಅವರು ತಮ್ಮ ಅನುಯಾಯಿಗಳಾದ ರಾಘವೇಂದ್ರ ಶಾಸ್ತ್ರಿ ಹಾಗೂ ಪ್ರಭಾಕರ್ ಅವರ ಮೂಲಕ ಸರ್ಕಾರಿ ಆಸ್ಪತ್ರೆ, ರಾಜ್ಯದ ಹಲವು ಕಡೆಸೇವಾ ಕಾರ್ಯ ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಸಾಂದ್ರಕಗಳು, ಆಕ್ಸಿಜನ್ ಸಿಲಿಂಡರ್ ಕೊಡುಗೆ ನೀಡಿದ್ದಾರೆ. ವೈದ್ಯರು, ದಾದಿಯರು, ರೋಗಿಗಳಿಗೆ ಉಚಿತ ಆಹಾರ ಪದಾರ್ಥಗಳು, ಮಾಸ್ಕ್, ಕೋವಿಡ್ ಸುರಕ್ಷಾ ಸಾಮಗ್ರಿಗಳನ್ನು ಈಗಾಗಲೇ ನೀಡಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಗೂ ಈಗಾಗಲೇ100 ಆಕ್ಸಿಜನ್ ಸಿಲಿಂಡರ್ ನೀಡಿದ್ದು, ಇನ್ನೂ100 ನೀಡಲು ಒಪ್ಪಿಗೆ ನೀಡಿದ್ದಾರೆ. ಇದೀಗ 650 ಅಲೆಮಾರಿ-ಅರೆ ಅಲೆಮಾರಿ, ಅಶಕ್ತರು, ಬಲಹೀನ ವರ್ಗದವರಿಗೆ ಆಹಾರ ಸಾಮಗ್ರಿ, ರೋಗಿಗಳಿಗೆ ಹಾಲು, ಬಿಸ್ಕೇಟ್, ಔಷಧ ನೀಡುತ್ತಿದ್ದಾರೆ. ಇವತ್ತಿನ ಕಷ್ಟಕಾಲದಲ್ಲಿ ಇದು ಪುಣ್ಯದ ಕೆಲಸ ಎಂದುಕೃತಜ್ಞತೆ ಸಲ್ಲಿಸಿದರು.
ಡೀಸಿ ಆರ್.ಲತಾ, ಸಿಇಒ ಪಿ.ಶಿವಶಂಕರ್, ನಗರ ಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ಎಸಿ ಎ.ಎನ್. ರಘುನಂದನ್, ತಹಶೀಲ್ದಾರ್ ಗಣಪತಿಶಾಸಿŒ, ಇಒ ಹರ್ಷವರ್ಧನ್, ಪೌರಾಯುಕ್ತ ಡಿ.ಲೋಹಿತ್ ಉಪಸ್ಥಿತರಿದ್ದರು.