ಅಥಣಿ: ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ಮೊಬೈಲ್ ಆಪ್ ತಂತ್ರಾಂಶದಲ್ಲಿ ಕೈಗೊಳ್ಳುವುದು ಮತ್ತು ಬೆಳೆ ಅಂದಾಜು ಸಮೀಕ್ಷೆ ಕುರಿತು ಚಿಕ್ಕೋಡಿ ವಿಭಾಗದ ಅಥಣಿ ಹಾಗೂ ರಾಯಬಾಗ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ತರಬೇತಿ ಜರುಗಿತು.
ಪಟ್ಟಣದ ಜೆ.ಇ. ಸಂಸ್ಥೆಯ ಆರ್.ಎಚ್. ಕುಲಕರ್ಣಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕೋಡಿ ವಿಭಾಗಾಧಿಕಾರಿ ರವಿಂದ್ರ ಕರಲಿಂಗನವರ ಮಾತನಾಡಿ, ಗ್ರಾಮ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ರೈತರ ಬೆಳೆಗಳ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ನಷ್ಟ ತಪ್ಪಿಸಬೇಕು ಎಂದರು.
ಬೆಳೆ ಕಟಾವು ಪ್ರಯೋಗಗಳನ್ನು ಮೊಬೈಲ್ ಆಪ್ ತಂತ್ರಾಂಶದಲ್ಲಿ ಅಳವಡಿಸುವಂತೆ ರೈತರಿಗೆ ಮನವರಿಕೆ ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣ ಅಧಿಕಾರಿ ರೇಖಾ ಶೆಟ್ಟರ ಮಾತನಾಡಿ, ಬೆಳೆ ಹಾನಿ ಆದಾಗ ಪರಿಹಾರ ವಿತರಣೆ ವೇಳೆ ಪ್ರಯೋಗ ಕೈಗೊಂಡು, ಇಳುವರಿ ಆಧಾರದ ಮೇಲೆ ಪರಿಹಾರ ಅವಲಂಬಿಸಿರುವುದರಿಂದ ಪ್ರಯೋಗಗಳು ನಷ್ಟವಾಗದಂತೆ ನೋಡಿಕೋಳ್ಳುವಂತೆ ತರಬೇತಿ ಪಡೆಯುವರಿಗೆ ಸೂಚಿಸಿದರು.
ಸ್ಥಳೀಯ ತಹಶೀಲ್ದಾರ ಎಂ.ಎನ್.ಬಳಿಗಾರ ಮಾತನಾಡಿ, ಎಲ್ಲ ಅಧಿಕಾರಿಗಳು ಇಲ್ಲಿ ಪಡೆದ ತರಬೇತಿಯನ್ನು ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿ ಹೇಳುವಂತೆ ಹೇಳಿದರು.
ಈ ವೇಳೆ ರವಿ ಬಂಗಾರೆಪ್ಪನವರ ಮಾತನಾಡಿದರು. ಎಸ್.ಎಎಲ್.ಕುಡ್ಡನವರ, ಸುಜಾತಾ ಹಿರೇಮಠ, ಮಹಾಂತೇಶ ಲಂಗೋಟಿ, ಜೆ.ವಿ.ನಡೋಣಿ, ಬಿ.ವೈ.ಹೊಸಕೇರಿ, ಎಂ.ಎ.ಮುಜಾವರ, ಪ್ರಸಾದ ಕುಲಕರ್ಣಿ ಸೇರಿದಂತೆ ಇತರರು ಇದ್ದರು.