Advertisement

“ಮಹಿಳೆಯ ಪರಿಶ್ರಮ ಗೌರವಿಸಿ’

08:20 AM Mar 29, 2018 | |

ಕಾರ್ಕಳ: ಸ್ತ್ರೀ ಪ್ರತಿಯೊಂದು ಕುಟುಂಬದ ಶಕ್ತಿ. ಇಂತಹ ಪ್ರಾಮುಖ್ಯ ಪಡೆದ ಮಹಿಳೆಯನ್ನು ಗೌರವದಿಂದ ಕಾಣಬೇಕು. ಮಹಿಳೆಯರ ಪರಿಶ್ರಮ ಗೌರವಿಸುವ ಕಾರ್ಯ ಮಹಿಳಾ ದಿನಾಚರಣೆಯ ಒಂದು ದಿನಕ್ಕಷ್ಟೇ ಸೀಮಿತ ಆಗಬಾರದು ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ, ಏ.ಐ.ಸಿ.ಟಿ.ಇ. ಹಿರಿಯ ಸಲಹೆಗಾರ್ತಿ ಪೊ.ಕೆ.ಸುಧಾ ರಾವ್‌ ಹೇಳಿದರು.

Advertisement

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರದಂದು ನಡೆದ ವಿಶ್ವಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ ಎನ್‌. ಚಿಪ್ಳೂಣRರ್‌ ಮಹಿಳೆಯರಿಗೆ ಸಮಾನ ಸ್ಥಾನಮಾನದ ಚಿಂತನೆ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯರೂಪಕ್ಕೆ ಬರುತ್ತಿದೆ. ಗ್ರಾಮ ಪಂಚಾಯತ್‌ ಮಟ್ಟದಿಂದ ಲೋಕಸಭೆಯವರೆಗೂ ಮಹಿಳೆಯರಿಗೆ ಉತ್ತಮ ಸ್ಥಾನ ಸಿಗುತ್ತಿರುವುದು ಸ್ವಾಗತಾರ್ಹ ಎಂದವರು ತಿಳಿಸಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ| ಐ. ರಮೇಶ್‌ ಮಿತ್ತಂತಾಯ, ಡಾ| ಶ್ರೀನಿವಾಸ ರಾವ್‌, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಸಂಯೋಜಕಿ ಡಾ| ವೀಣಾ ದೇವಿ ಶಾಸ್ತ್ರೀಮs… ಸ್ವಾಗತಿಸಿ, ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ| ವಿದ್ಯಾ ಅತಿಥಿ ಪರಿಚಯ ಮಾಡಿದರು. 

Advertisement

ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕಿ ಡಾ| ಜ್ಯೋತಿ ಶೆಟ್ಟಿ ವಂದಿಸಿದರು. ಸಹ ಪ್ರಾಧ್ಯಾಪಕಿ ಸ್ವಾತಿ ಪೈ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಅನಂತರ ತಜ್ಞರ ಚರ್ಚಾ ಕಾರ್ಯಕ್ರಮ ಹಾಗೂ ಮಹಿಳೆಯರಿಗೆ ಸೆಲ್ಫ್ಡಿಫೆನ್ಸ್‌ ಬಗ್ಗೆ ತರಬೇತಿ ಶಿಬಿರ ನಡೆಯಿತು.

ಹಸನ್ಮುಖೀಯಾಗಿ ವ್ಯವಹರಿಸಿ
ಪ್ರತಿಯೋರ್ವನೂ ಸಮಾಜದ ಏಳ್ಳೆ  ಬಯಸಿ ಕೆಲಸಮಾಡಿದರೆ ಸಮಾಜ ಸಬಲವಾಗುತ್ತದೆ. ಇನ್ನೊಬ್ಬರ ಬಗ್ಗೆ ದ್ವೇಷ, ಅಸೂಯೆ ಮುಂತಾದ ಮತ್ಸರದ ಭಾವನೆ  ಇಟ್ಟುಕೊಳ್ಳದೆ ಎಲ್ಲರೊಂದಿಗೂ ಹಸನ್ಮುಖೀಯಾಗಿ ವ್ಯವಹರಿಸುವುದು ಉತ್ತಮ. ಹಸನ್ಮುಖೀಯಾಗಿರುವುದರಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ ಎನ್ನುವುದು ಪ್ರತಿಯೋರ್ವನ ಧೋರಣೆಯಾಗಬೇಕು ಎಂದು ಪ್ರೊ| ಸುಧಾ ರಾವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next