Advertisement

ಇತರ ಧರ್ಮ ಗೌರವಿಸಿ ಸಮನ್ವಯ ಸಾಧಿಸಿ: ಸಿಎಂ ಬೊಮ್ಮಾಯಿ

08:35 PM Jul 10, 2022 | Team Udayavani |

ಬೆಂಗಳೂರು: ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮನ್ವಯ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸಮಾನತೆಯ ಭಾವವನ್ನು ತರಲು ಸಾಧ್ಯವಾಗಲಿದೆ. ಆದ್ದರಿಂದ ಇತರ ಧರ್ಮಗಳನ್ನು ಗೌರವಿಸುವ ಮೂಲಕ ಸಮನ್ವಯ ಸಾಧಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಭಾನುವಾರ ನಿವೃತ್ತ ಎಂಜಿನಿಯರ್‌ ಇನ್‌ ಚೀಫ್ ಹಾಗೂ ರಾಜ್ಯ ಸರ್ಕಾರದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಡಾ. ಎಲ್ ಶಿವಲಿಂಗಯ್ಯನವರ ನುಡಿ-ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಡಾ. ಎಲ್ .ಶಿವಲಿಂಗಯ್ಯನರು ನಮ್ಮ ತಂದೆಯವರ ಜೊತೆಗಿನ ಒಡನಾಟ, ಆತ್ಮೀಯತೆ, ರಾಜ್ಯ ಪ್ರಗತಿಪಥದಲ್ಲಿ ನಡೆಯಿತು ಎಂಬ ಬಗ್ಗೆ ಅತ್ಯಂತ ರೋಚಕವಾಗಿ ಹೇಳುತ್ತಿದ್ದರು. ಉನ್ನತ ಚಿಂತನೆಯ ವ್ಯಕ್ತಿತ್ವ ಅವರದು. ಹಲವಾರು ನೀರಾವರಿ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡ ನಾಡಿಗೆ ಅನೇಕ ರೀತಿಯ ಮಹನೀಯರ ಸ್ಮರಣೆ ಮಾಡಿದಾಗ ಮಾತ್ರ ಪ್ರೇರಣೆ ದೊರೆಯುತ್ತದೆ. ಬೆಂಗಳೂರಿನಲ್ಲಿ ವಿಕ್ಟೊರಿಯಾ, ನಿಮಾನ್ಸ್‌ ಸೇರಿದಂತೆ ಹಲವಾರು ಆಸ್ಪತ್ರೆಗಳ ವಿನ್ಯಾಸ ಹಾಗೂ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದಿನ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಸ್ಥೆಗಳು ಅವರ ದೂರದೃಷ್ಟಿಯ ಫ‌ಲವಾಗಿದೆ. ಅವರ ಹಾದಿಯಲ್ಲಿ ನಡೆದು ಕೆಲಸ ಮಾಡಿದಾಗ ಸಮಾಜಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

ಮಗುವಿನ ಮುಗ್ಧತೆಯ ವ್ಯಕ್ತಿ: ಮನುಷ್ಯನಿಗೆ ತನ್ನ ಜೀವನದ ಉದ್ದೇಶ ತಿಳಿದಿದ್ದರೆ ಒಂದು ಸಂಸ್ಥೆಯಾಗಿ ಬೆಳೆಯಬಲ್ಲ ಎಂಬುದನ್ನು ಡಾ. ಎಲ್ .ಶಿವಲಿಂಗಯ್ಯ ಅವರು ನಿರೂಪಿಸಿದ್ದಾರೆ. ನಾವು ಬದುಕನ್ನು ನಿಭಾಯಿಸುವ ರೀತಿ ಬಹಳ ಮುಖ್ಯ. ಮಗುವಿನ ಮುಗ್ಧತೆ ಹಾಗೂ ಆತ್ಮಸಾಕ್ಷಿಯನ್ನು ಕಾಯ್ದುಕೊಂಡು ಜೀವನ ನಡೆಸಿದವರು. ನಮ್ಮ ದೇಶಕ್ಕೆ ದೊಡ್ಡ ಚರಿತ್ರೆಇದ್ದು, ಚಾರಿತ್ರ್ಯ ಬೆಳೆಸಬೇಕಿದೆ. ಒಳ್ಳೆಯದನ್ನು ಪೋ›ತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಣಿ ಸತೀಶ್‌, ಮೋಟಮ್ಮ ಮತ್ತು ರಾಮಚಂದ್ರಗೌಡ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next