ಗದಗ: ತಾಲೂಕಿನ ಬಳಗಾನೂರು ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಅಲ್ಲದೇ, ಬಳಗಾನೂರು-ಲಿಂಗದಾಳ ರೋಡ್ ಮಧ್ಯೆ ಇರುವ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಶನಿವಾರ ಜಿಲ್ಲಾಡಳಿತ ಭವನ ಎದುರು ಬಳಗಾನೂರ ಗ್ರಾಮ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದ್ದು, ತಕ್ಷಣವೇ ನಿವಾರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರ ಸುಮಾರು 2000 ಹೆಕ್ಟೇರ್ ಪ್ರದೇಶದ ಜಾಮಿನುಗಳು ಲಿಂಗದಾಳ ಭಾಗದಲ್ಲಿವೆ. ಹೀಗಾಗಿ ಪ್ರತಿನಿತ್ಯ ರೈಲ್ವೆ ಹಳಿ ದಾಟಿ ಸಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರ ದೃಷ್ಟಿಯಿಂದ ಬಳಗಾನೂರ-ಲಿಂಗದಾಳ ರೋಡ್ ಮಧ್ಯೆ ಇರುವ ರೈಲ್ವೆ ಗೇಟ್ ನಂಬರ್ 10ರ 20/700 ಮತ್ತು 20/800 ಗದಗ-ವಿಜಯಪುರ ಮಧ್ಯ ಇರುವ ರೈಲು ಹಳಿಯ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸಬೇಕು. ಇಲ್ಲವಾದರೆ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಬಳಗಾನೂರ ಗ್ರಾಮ ಹಿತರಕ್ಷಣಾ ಸಮಿತಿ ಮುಖಂಡ ಪ್ರೊ| ಹನುಮಂತಗೌಡ ಆರ್.ಕಲ್ಮನಿ, ಗ್ರಾ.ಪಂ. ಉಪಾಧ್ಯಕ್ಷ ಎಂ.ಬಿ. ವಗ್ಗನವರ, ಸದಸ್ಯರಾದ ಎಂ.ಬಿ. ಕಾಶಿಗೌಡರ, ಎಸ್.ಎಚ್. ಅಗಸಿಮನಿ ಪ್ರಭಣ್ಣ ಗೂಳರಡ್ಡಿ, ಹೇಮಣ್ಣ ದೊಡ್ಡಮನಿ, ತಾ.ಪಂ. ಮಾಜಿ ಸದಸ್ಯ ಶೇಖಪ್ಪ ಅಗಸಿಮನಿ, ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ, ಹಿರಿಯರಾದ ಚೆನ್ನವೀರಪ್ಪ ಚವಡಿ, ಕೃಷ್ಟಪ್ಪ ಪಡೆಸೂರು, ಎಸ್.ಬಿ. ಛಟ್ರಿ, ಉಮೇಶ ಮಡಿವಾಳರ, ಹನುಮಪ್ಪ ಛಟ್ರಿ, ವೀರೂಪಾಕ್ಷಿ ಹಿತ್ತಲಮನಿ, ಆರ್.ಎನ್. ಪಾಟೀಲ, ಬಸವರಾಜ ಕರಡ್ಡಿ, ಸಂಗಪ್ಪ ಗಡ್ಡೆಪ್ಪನವರ, ನಿಜಗುಣಪ್ಪ ಶಿವಸಿಂಪರ, ಸುರೇಶ ಛಲವಾದ, ಶರಣಪ್ಪ ಕರಡ್ಡಿ, ಮುತ್ತು ಛಟ್ರಿ ಮತ್ತಿತರರು ಇದ್ದರು.
Advertisement
ಅದಕ್ಕೂ ಮುನ್ನ ಇಲ್ಲಿನ ಮಹಾತ್ಮಗಾಂಧಿ ವೃತ್ತದಿಂದ ರೋಟರಿ ಸರ್ಕಲ್, ಭೀಷ್ಮಕೆರೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಮುಳಗುಂದ ನಾಕಾ, ಟಿಪ್ಪು ಸುಲ್ತಾನ್ ಮಾರ್ಗವಾಗಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.
Related Articles
Advertisement