Advertisement

ರೈತರ ಸಂಕಷ್ಟ ಪರಿಹರಿಸಿ: ದೇವೇಗೌಡ ಪತ್ರ

01:25 AM Apr 11, 2020 | Sriram |

ಬೆಂಗಳೂರು: ಲಾಕ್‌ಡೌನ್‌ ರೈತರ ಪಾಲಿಗೆ ಅತೀವ ಸಂಕಷ್ಟ ತಂದೊಡ್ಡಿದ್ದು, ಬೆಳೆದ ಉತ್ಪನ್ನಕ್ಕೆ ನ್ಯಾಯ ಯುತ ಬೆಲೆಯೂ ಇಲ್ಲ, ಸಾಗಾಟ ಮತ್ತು ಮಾರಾಟಕೆj ವ್ಯವಸ್ಥೆಯೂ ಇಲ್ಲದಂತಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಸಿಎಂ ಯಡಿ ಯೂರಪ್ಪ ಅವರಿಗೆ ಪತ್ರ ಬರೆದು ರೈತರ ನೆರವಿಗೆ ಧಾವಿಸುವಂತೆ ಕೋರಿದ್ದಾರೆ. ಲಾಕ್‌ಡೌನ್‌ ವೇಳೆ ಗ್ರಾಮ ಮಟ್ಟ ದಲ್ಲೆ ಹಾಲು ಸಂಗ್ರಹಿಸುವಂತೆ ತರಕಾರಿಯನ್ನು ಸರಕಾರವೇ ಸಂಗ್ರಹಿಸಿ ಮಾರುಕಟ್ಟೆಗೆ ತರಬೇಕಿತ್ತು. ಹಾಪ್‌ ಕಾಮ್ಸ…, ಸಫಲ್‌, ನ್ಯಾಪೆಡ್‌, ಎಪಿಎಂಸಿ ಮೂಲಕ ತರಕಾರಿ ಕೊಳ್ಳುವ ವ್ಯವಸ್ಥೆ ಮಾಡಬೇಕಿತ್ತು. ಈ ಬಗ್ಗೆ ಸರಕಾರ ಹೇಳಿತಾದರೂ ಏನೂ ಆಗಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ತರಕಾರಿ ಸಂಗ್ರಹಣೆ, ಸಾಗಾಟ, ಮಾರಾಟ ನಿರ್ಬಂಧಿಸಬಾರದು. ಸಂಸ್ಕರಣ ಘಟಕಗಳಿಗೆ ಪೂರ್ಣ ವಿನಾಯತಿ ನೀಡಬೇಕು. ದೇಶದ ಯಾವುದೇ ಪ್ರದೇಶಕ್ಕೆ ಅಡೆತಡೆ ಗಳಿಲ್ಲದೆ ಸಾಗಾಟಕ್ಕೆ ಮತ್ತು ಮಾರಾಟಕ್ಕೆ ಅನುವು ಮಾಡಿಕೊಡಬೇಕು. ತೋಟಗಾರಿಕೆ ಉತ್ಪನ್ನ ಮತ್ತು ಸಂಸ್ಕರಿಸಿದ ಪದಾರ್ಥಗಳ ರಫ್ತಿಗೆ ನಿರ್ಬಂಧ ಇರಬಾರದು. ತರಕಾರಿ ಮಾರುಕಟ್ಟೆಗೆ ನ್ಯಾಷನಲ್‌ ಗ್ರಿಡ್‌ ರಚಿಸಬೇಕು ಎಂದು ಅವರು ಪತ್ರದ ಮೂಲಕ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next