Advertisement

ಇಂಡಿ ಪ್ರತ್ಯೇಕ ಜಿಲ್ಲೆ ಆಗದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ- ಯಶವಂತರಾಯಗೌಡ

03:38 PM Oct 04, 2019 | keerthan |

ವಿಜಯಪುರ: ಭೌಗೋಳಿಕವಾಗಿ ವಿಜಯಪುರ ಜಿಲ್ಲಾ ಕೇಂದ್ರದಿಂದ ದೂರ ಇರುವುದು ಸೇರಿದಂತೆ ಹಲವು ಕಾರಣಕ್ಕೆ ಇಂಡಿ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ಈ ಕುರಿತು ಸಿ.ಎಂ.  ಅವರಿಗೆ ಮನವಿ ಸಲ್ಲಿಸಿ, ಮನವರಿಕೆ ಮಾಡಿಕೊಟ್ಟಿದ್ದೇನೆ. ಇಂಡಿ ಜಿಲ್ಲೆ ರಚನೆ ಮಾಡದಿದ್ದರೆ ಶಾಸಕ ಸ್ಥಾನಕ್ಜೆ ರಾಜೀನಾಮೆ ನೀಡಲು ಹಿಂಜರಿಯಲಾರೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ನೂತನ ಜಿಲ್ಲೆ ರಚನೆ ಪ್ರಕ್ರಿಯೆ ಆರಂಭಗೊಂಡಿದೆ. ಇಂಥ ಸಂದರ್ಭದಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವಲ್ಲಿ ಸರಕಾರ ಕಡೆಗಣಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಹಿಂಜರಿಯುವುದಿಲ್ಲ ಎಂದರು.

ಯಾವುದೇ ರೀತಿಯ ಹೋರಾಟ, ಪ್ರತಿಭಟನೆ ಇಲ್ಲದೇ ನಾನು ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಅರ್ಧ ಶತಮಾನ ದಷ್ಟು ಹಳೆಯ ಬೇಡಿಕೆಯಾಗಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಶಾಸಕತ್ವದ ಮೊದಲ ಅವಧಿಯ ಕೇವಲ ಐದು ವರ್ಷಗಳಲ್ಲೇ ಮಾಡಿ ತೋರಿಸಿದ್ದೇನೆ. ಜನರ ಬೇಡಿಕೆ ಇದ್ದರೂ ಒಂದೇ ಒಂದು ಹೋರಾಟ ಇಲ್ಲದೇ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ರಚಿಸಿದ್ದೇನೆ. ಇಂಡಿ ಪ್ರತ್ಯೇಕ ಜಿಲ್ಲೆ ರಚನೆ ವಿಷಯದಲ್ಲಿ ಕೂಡ ಸರಕಾರಕ್ಕೆ ಶಾಂತ ರೀತಿಯಲ್ಲಿ ಮನವಿ ಮಾಡಿದ್ದೇನೆ. ಬೇರೆ ಜಿಲ್ಲೆ ರಚಿಸಿ, ಇಂಡಿ ಪ್ರತ್ಯೇಕ ಜಿಲ್ಲೆಯನ್ನು ಕಡೆಗಣಿಸಿದರೆ ಜನರ ಭಾವನೆಗೆ ಸ್ಪಂದಿಸಲು ಶಾಸಕ ಸ್ಥಾನಕ್ಜೆ ರಾಜೀನಾಮೆ ನೀಡಿಯೇ ತೀರುತ್ತೇನೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next