Advertisement

X ಸಂಸ್ಥೆಯ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ

10:01 PM Dec 01, 2023 | Team Udayavani |

ವಾಷಿಂಗ್ಟನ್‌: ಉದ್ಯಮಿ ಎಲಾನ್‌ ಮಸ್ಕ್ ಒಡೆತನದ ಎಕ್ಸ್‌ (ಟ್ವಿಟರ್‌) ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದು, ಇದೀಗ ಸಂಸ್ಥೆಯ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ ಮಸ್ಕ್ಗೆ ತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಜಾಹೀರಾತುದಾರರ ಕುರಿತು ಮಸ್ಕ್ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

Advertisement

ಅಲ್ಲದೇ ಹಲವಾರು ಜಾಹೀರಾತುದಾರರು ಈ ವಿಚಾರದಿಂದಲೇ ಟ್ವಿಟರ್‌ಗೆ ಜಾಹೀರಾತು ನೀಡುವುದರಿಂದಲೂ ಹಿಂದೆ ಸರಿದಿದ್ದರು. ಮಸ್ಕ್ ಕ್ಷಮೆಯಾಚಿಸಿದ ಬಳಿಕವೂ ಈ ಕೋಪ ತಣಿದಿರಲಿಲ್ಲ. ಈ ನಡುವೆಯೇ ಮಸ್ಕ್ ಎಕ್ಸ್‌ನ ಉದ್ಯೋಗಿಗಳಿಗೆ ಬೋನಸ್‌ ಕೂಡ ನೀಡಿ ವೇತನದ ಬಗ್ಗೆ ಖಾತರಿ ನೀಡಿದ್ದರು. ಆದರೂ ಈಗ ಇದಕ್ಕಿದ್ದಂತೆ ಉದ್ಯೋಗಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಅದರಲ್ಲೂ ಮಾರುಕಟ್ಟೆ ವಿಭಾಗದ ಸಿಬ್ಬಂದಿ ರಾಜೀನಾಮೆ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next