Advertisement

ಸಿಎಲ್ ಪಿ ಸಭೆ ಅಂತ್ಯಗೊಂಡ ಬೆನ್ನಲ್ಲೇ “ಕೈ”ಶಾಸಕ ರೋಷನ್ ಬೇಗ್ ರಾಜೀನಾಮೆ

10:42 AM Jul 10, 2019 | Team Udayavani |

ಬೆಂಗಳೂರು: ಸಿಎಲ್ ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮುಕ್ತಾಯಗೊಂಡ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ಮುಖಂಡ, ಶಿವಾಜಿನಗರ ಶಾಸಕ ರೋಷನ್ ಬೇಗ್ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ಪಕ್ಷ ವಿರೋಧಿ ಹೇಳಿಕೆ ನೀಡಿದ್ದ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷ ಅಮಾನತುಗೊಳಿಸಿತ್ತು. ಮಂಗಳವಾರ ಬೆಳಗ್ಗೆ ಖುದ್ದು ಸ್ಪೀಕರ್ ಕಚೇರಿಗೆ ಭೇಟಿ ನೀಡಿದ ರೋಷನ್ ಬೇಗ್ ಅವರು ರಮೇಶ್ ಕುಮಾರ್ ಗೆ ರಾಜೀನಾಮೆ ಪತ್ರ ನೀಡಿದ್ದಾರೆ.

ರೋಷನ್ ಬೇಗ್ ರಾಜೀನಾಮೆಯೊಂದಿಗೆ ಒಟ್ಟು 14 ಶಾಸಕರು ರಾಜೀನಾಮೆ ಕೊಟ್ಟಂತಾಗಿದೆ. ರೋಷನ್ ಬೇಗ್ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಲ್ಲಿಸುವ ವೇಳೆ ಕೆಜೆ ಜಾರ್ಜ್ ಮತ್ತು ಕೃಷ್ಣಭೈರೇಗೌಡ ಕೂಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next