Advertisement
ಈಶ್ವರಪ್ಪ ರಾಜೀನಾಮೆ ಹಿನ್ನೆಲೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜೀನಾಮೆ ನಮಗೆ ಮುಖ್ಯವಲ್ಲ. ಮೊದಲು ಅವರ ಬಂಧನವಾಗಬೇಕು ಎಂದು ಆಗ್ರಹಿಸಿದರು.
Related Articles
Advertisement
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈಶ್ಚರಪ್ಪ ಇಲ್ಲಿಯವರೆಗೆ ಸುಳ್ಳು ಹೇಳಿಕೊಂಡಿದ್ದರು. ನಮ್ಮ ಹೋರಾಟ ಚುರುಕಾದ ಮೇಲೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಅದರ ಅರ್ಥ 40% ಲಂಚದ ಆರೋಪ ನಿಜವಾದಂತಾಯ್ತು. ತಪ್ಪು ಅರಿವಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಸಂತೋಷ್ ಯಾರು ಎಂದು ಗೊತ್ತಿಲ್ಲದೇ ಮಾನನಷ್ಟ ಮೊಕದ್ದಮೆ ಹಾಕಿದ್ದರಾ ? ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಸೆಕ್ಷನ್ 13 ರ ಅಡಿ ಈಶ್ವರಪ್ಪ ಮೇಲೆ ಎಫ್ ಐ ಆರ್ ಹಾಕಬೇಕು. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಕಾನೂನು ಎಲ್ಲರಿಗೂ ಒಂದೇ ಅಲ್ಲವೇ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.