Advertisement

ಹೊಳೆಯ ನೀರು ಹರಿಯದೆ ನಾಂಗಿ ಪ್ರದೇಶದ ನಿವಾಸಿಗಳಿಗೆ ಆತಂಕ !

08:22 PM Jul 16, 2019 | sudhir |

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ ಮೊಗ್ರಾಲ್‌ ಹೊಳೆಯ ನದಿಅಳಿವೆ ತೆರೆಯದ ಕಾರಣ ಮೊಗ್ರಾಲ್‌ ನಾಂಗಿ ಪ್ರದೇಶದ ಕೆಲವು ನಿವಾಸಿಗರು ಆತಂಕಪಡುವಂತಾಗಿದೆ. ಹೊಳೆಯ ನೀರು ಸಮುದ್ರಕ್ಕೆ ಸೇರುವಲ್ಲಿ ಮರಳು ತುಂಬಿ ಹೊಳೆಯ ನೆರೆ ನೀರು ಸಮುದ್ರಕ್ಕೆ ಸಾಗದೆ ಪ್ರದೇಶದಲ್ಲಿ ಉಕ್ಕಿ ಹರಿದು ಸ್ಥಳೀಯ ನಾಂಗಿ ಮಮ್ಮು ಮತ್ತು ಇತರ ಮನೆಯ ಅಂಗಳಕ್ಕೆ ನುಗ್ಗಿದ ಕಾರಣ ಮನೆಯವರು ಜೀವ ಕೈಯಲ್ಲಿ ಹಿಡಿದು ಜೀವಿಸಬೇಕಾಗಿದೆ.

Advertisement

ವರ್ಷಂಪ್ರತಿ ನಾಂಗಿ ಕಡಪ್ಪುರದಲ್ಲಿ ಇದೇ ರೀತಿ ನಡೆಯುತ್ತಿದ್ದು ಹೊಳೆಯ ನೀರು ಅಪಾಯದಂಚಿಗೆ ತಲಪಿದ ಬಳಿಕವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಜೆ.ಸಿ.ಬಿ. ಯಂತ್ರದ ಮೂಲಕ ಅಳಿವೆಯಲ್ಲಿ ಕಣಿವೆ ನಿರ್ಮಿಸಿ ನೀರನ್ನು ಸಮುದ್ರಕ್ಕೆ ಹರಿಯಬಿಡಲಾಗುವುದು.ಆದರೆ ಈ ಬಾರಿ ಇನ್ನೂ ಆಳಿವೆ ತೆರೆದಿಲ್ಲ. ನೆರೆ ಭೀತಿಯ ಜೀವಭಯದಿಂದ ಮಮ್ಮು ಮತ್ತು ಮನೆಯವರು ಮನೆ ತೊರೆದು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿರುವರು.

ನೆರೆನೀರಿನಿಂದಾಗಿ ಸ್ಥಳೀಯ ಕರಾವಳಿ ತೀರದ ಡಾಮರು ರಸ್ತೆಯೂ ಅಪಾಯದಂಚಿನಲ್ಲಿದೆ. ರಸ್ತೆ ಮೇಲೆ ನೀರು ಹರಿದು ರಸ್ತೆ ಕೊಚ್ಚಿ ಹೋಗುವ ಮುನ್ನ ಮತ್ತು ಮನೆಗಳು ಕುಸಿಯುವ ಮುನ್ನ ಆಳಿವೆ ತೆರೆದು ನೀರು ಸಮುದ್ರಕ್ಕೆ ಹರಿಯುವಂತೆ ಕ್ರಮ ಕೈಗೊಳ್ಳಬೇಕಾಗಿ ಸ್ಥಳೀಯ ನಿವಾಸಿಗರು ಮತ್ತು ಮೊಗ್ರಾಲ್‌ ದೇಶೀಯ ವೇದಿ ಸಂಘಟನೆ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಒತ್ತಾಯಿಸಿ ರುವರು. ಇಲ್ಲದಿದ್ದಲ್ಲಿ ನೆರೆ ನೀರು ಉಕ್ಕಿ ಅಪಾಯ ಸಂಭವಿಸಲಿದೆ. ಸಂಭಾವ್ಯ ದುರ‌ಂತಕ್ಕೆ ಮುನ್ನ ಅಧಿಕಾರಿಗಳು ಕಣ್ತೆರೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next