Advertisement

ಶಾಲಾರಂಭಕ್ಕೂ ಮೊದಲೇ ವಸತಿ ಶಾಲೆ ಬಿರುಕು

02:27 PM Nov 01, 2021 | Team Udayavani |

ಅರಕಲಗೂಡು: ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆ ಕಟ್ಟಡ ಉದ್ಘಾಟನೆಗೊಂಡು ಶಾಲೆ ಪ್ರಾರಂಭವಾ ಗುವ ಮೊದಲೇ ಸೋರುತ್ತಿರುವುದು ಹಾಗೂ ಕಟ್ಟಡ ಬಿರುಕು ಕಾಣಿಸುತ್ತಿರುವುದು ಪೋಷಕರು ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಹೊನ್ನವಳ್ಳಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ 19 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಲ್ಪ ಸಂಖ್ಯಾತ ಮೊರಾರ್ಜಿ ವಸತಿ ಶಾಲೆ ಪ್ರಾರಂಭವಾಗುವ ಮೊದಲೇ ಕಟ್ಟಡ ತನ್ನ ಗುಣಮಟ್ಟವನ್ನು ಹೊರಹಾಕಿರುವುದು, ಇದರ ಗುಣಮಟ್ಟದ ಸತ್ಯಾಸತೆ ಕುರಿತು ಪ್ರಶ್ನೆ ಮಾಡುವಂತಾಗಿದೆ.

Advertisement

ಶಾಸಕ ಎ.ಟಿ. ರಾಮಸ್ವಾಮಿ ಬಡ ವಿದ್ಯಾರ್ಥಿಗಳು ಹಾಗೂ ಶಿಕ್ಷಣದಿಂದ ವಂಚಿತರಾಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಅರಕಲಗೂಡು ಕ್ಷೇತ್ರದಲ್ಲಿ 5 ವಸತಿ ಶಾಲೆಗಳ ಸುಸರ್ಜಿತ ಹಾಗೂ ಉತ್ತಮ ಗುಣ ಮಟ್ಟದ ಸೌಕರ್ಯ ಗಳನ್ನ ಕಲ್ಪಿಸುವ ನಿಟ್ಟಿನಲ್ಲಿ ತಲಾ ಒಂದೊಂದು ವಸತಿ ಶಾಲೆಗೆ 25 ಕೋಟಿಯಂತೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಇವುಗಳ ನಿರ್ಮಾ ಣದ ವಿಷಯದಲ್ಲೂ, ಶಾಸಕರೇ ಖುದ್ದಾಗಿ ಸ್ಥಳವನ್ನ ಗುರುತಿಸುವ ಜತೆಗೆ ಕಟ್ಟಡದ ಕಾಮಗಾರಿಯ ಸಮ ಯದಲ್ಲಿ ಭೇಟಿ ನೀಡಿ ಗುತ್ತಿಗೆದಾರ ಹಾಗೂ ಸಂಬಂಧಿ ಸಿದ ಇಲಾಖೆ ಗಳಿಗೆ ಮಾರ್ಗದರ್ಶನ ಮಾಡಿ ಉತ್ತಮ ಕಾಮಗಾರಿಗೆ ಸೂಚಿಸಿದ್ದರು.

ಇಷ್ಟೆಲ್ಲಾ ಅರಿವು ಮೂಡಿಸಿದರೂ, ಗುತ್ತಿಗೆದಾರ ಹಾಗೂ ಗೃಹ ಮಂಡಳಿ ಇಲಾಖೆಯ ಬೇಜವಾಬ್ದಾರಿ ತನದಿಂದ ಹೊನ್ನವಳ್ಳಿ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆ ಕಟ್ಟಡ ಕಳಪೆ ಕಾಮಗಾರಿಯ ಕಾರಣ ದಿಂದ ಗೋಡೆ ಬಿರುಕು ಬಿಟ್ಟಿದೆ. ಚಾವಣಿ, ಕಿಟಕಿ ಬಾಗಿಲುಗಳ ಜಾಗದಲ್ಲಿ ನೀರು ಸೋರುತ್ತಿರುವುದು ಕಂಡು ಬಂದಿದೆ. ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ: ಗೃಹ ಮಂಡಳಿ ಇಲಾಖಾ ವತಿಯಿಂದ ನಡೆಯುತ್ತಿರುವ ಅಲ್ಪ ಸಂಖ್ಯಾತ ಮೊರಾರ್ಜಿ ವಸತಿ ಶಾಲೆಯ ಕಟ್ಟಡದ ವ್ಯವ ಸ್ಥೆಯನ್ನು ಕಂಡರೆ ಆ ಕಾಮಗಾರಿ ಗುಣಮಟ್ಟಕ್ಕೆ ಕೈ ಗನ್ನಡಿಯಾಗಿದೆ.

ಇದನ್ನೂ ಓದಿ:- ತಾಳಿಕೋಟೆಯ ಬಸವೇಶ್ವರ ಮಾರುಕಟ್ಟೆಯಲ್ಲಿ ಕನ್ನಡ ಕಂಪು

2019 ರಲ್ಲಿ ಶಂಕು ಸ್ಥಾಪನೆಗೊಂಡು ಪ್ರಾರಂಭವಾದ ಈ ಕಟ್ಟಡ 19 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ 10 ಕೋಟಿ ಬಿಡುಗಡೆಯಾಗಿ ಈ ಹಣದಲ್ಲಿ ಶಾಲ ಕೊಠಡಿಗಳು, ಊಟದ ಹಾಲ್‌, ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿಯನ್ನು ನಿರ್ಮಿಸಲಾಗಿದೆ. 2ನೇ ಹಂತದ 10 ಕೋಟಿ ಹಣದಲ್ಲಿ ಈಗಾಗಲೇ 5 ಕೋಟಿ ಹಣವನ್ನ ಬಿಡುಗಡೆ ಮಾಡಿದ್ದು, ಇದರಲ್ಲಿ ಕಾಂಪೌಂಡ್‌, ಆಟದ ಮೈದಾನ ನಿರ್ಮಿಸಲು ಆದ್ಯತೆ ಮೇರೆಗೆ ಕಾಮಗಾರಿ ಯನ್ನು ನಡೆಸಲು ಶಾಸಕ ಎ.ಟಿ. ರಾಮಸ್ವಾಮಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಕಟ್ಟಡವೇ ಕಳಪೆಯಿಂದ ಕೂಡಿರುವುದರಿಂದ ಇನ್ನು ಉಳಿದ ಕಾಮಗಾರಿಯನ್ನು ಯಾವ ರೀತಿ ಮಾಡುತ್ತಾರೆ ಎಂಬುವುದೇ ಯಕ್ಷ ಪ್ರಶ್ನೆಯಾಗಿ ಪರಿಣಮಿಸಿದೆ.

Advertisement

ಶಾಸಕರೇ ಪರಿಶೀಲನೆ ನಡೆಸಿ: ಅರಕಲಗೂಡು ಕ್ಷೇತ್ರ ವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವ ಉದ್ದೇಶ ದಿಂದ 150 ಕೋಟಿಗೂ ಅಧಿಕ ಹಣವನ್ನು ನೀಡಲಾ ಗಿದೆ. ಶಾಸಕರು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ವನ್ನು ಚಿಂತಿಸಿ ಸಾರ್ವಜನಿಕರ ತೆರಿಗೆಯ ಹಣವನ್ನ ಲೋಪವಾಗದಂತೆ ಜಾಗೃತಿ ವಹಿಸಿ ಕ್ಷೇತ್ರಕ್ಕೆ ತರುತ್ತಿ ದ್ದಾರೆ. ಇವುಗಳ ಶಂಕು ಸ್ಥಾಪನೆಯ ಸಂದರ್ಭದಲ್ಲೆ ಶಾಸಕರು ಬಹಿರಂಗವಾಗಿಯೇ ಶಾಲೆಯ ಕಟ್ಟಡಗಳು ಮಕ್ಕಳ ದೇವಾಲಯವಿದ್ದಂತೆ, ಆ ದೇವಾಲಯವನ್ನು ನಿರ್ಮಿಸುವಾಗ ಜಾಗರೂಕತೆಯಿಂದ ನಿರ್ಮಿಸಿ ಯಾವುದೇ ಲೋಪಗಳು ಎದುರಾಗದಂತೆ ಎಚ್ಚರ ವಹಿಸಿ ಎಂದು ಹೇಳಿದ್ದರು. ಆದರೆ ಈಗ ಗೋಡೆ ಬಿರುಕು, ಮಳೆ ನೀರು ಸೋರಿಕೆ ಸಾರ್ವಜನಿಕ ವಲಯದಲ್ಲಿ ಬೇಸರವನ್ನು ಉಂಟು ಮಾಡಿದೆ.

ತರಾತುರಿಯಲ್ಲಿ ಮೊರಾರ್ಜಿ ವಸತಿ

ಶಾಲೆ ಉದ್ಘಾಟನೆಗೊಂಡಿದ್ದು, ಈಗ ಶಾಲೆ ಪ್ರಾರಂಬಿಸಲು ಮುಂದಾಗಿರುವುದು ಸರಿಯಲ್ಲ. ಅದರ ನ್ಯೂನತೆಗಳನ್ನು ಶಾಸಕರು ಅರಿತು ಸರಿಪಡಿಸಿ ನಂತರ ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ. – ಭುವನೇಶ, ಗ್ರಾಮಸ್ಥರು.

ಗುಣಮಟ್ಟದ ಪರಿಶೀಲನೆಗೆ ಒತ್ತು-

ಹೊನ್ನವಳ್ಳಿ ಅಲ್ಪಸಂಖ್ಯಾತ ಮೊರಾರ್ಜಿ ಶಾಲೆಯನ್ನ ಈಗಾಗಲೇ ಉದ್ಘಾಟಿಸಲಾಗಿದ್ದು, ಅರಕಲಗೂಡು ಪಟ್ಟಣದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಯನ್ನು 2-3 ದಿನಗಳಲ್ಲಿ ಸ್ಥಳಾಂತರಿಸಲು ಕ್ರಮ ಜರುಗಿಸಲಾಗಿದೆ. ಕಳಪೆ ವಿಷಯ ಈಗ ತಿಳಿದು ಬರುತ್ತಿರುವುದರಿಂದ ಕಟ್ಟಡಕ್ಕೆ ಸಂಬಂದಿಸಿದ ಗೃಹ ಮಂಡಳಿ ಇಲಾಖೆಯಿಂದ ವರದಿ ಪಡೆದು ಒಂದು ವೇಳೆ ಗುಣಮಟ್ಟವಿಲ್ಲದಿದ್ದರೆ ಕಟ್ಟಡ ನಿರ್ವಹಣೆಗೆ 2 ವರ್ಷ ಸಮಯ ಇರುವುದರಿಂದ ಅವರಿಂದಲೇ ಮತ್ತೆ ಕಾಮಗಾರಿ ನಡೆಸಲಾಗು ವುದು ಎಂದು ಅಲ#ಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಜಿತೇಂದ್ರ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next