Advertisement

ನಿವೇಶನ-ಹಕ್ಕು ಪತ್ರಕ್ಕಾಗಿ ಸಚಿವರ ಮನೆ ಬಳಿ ಧರಣಿ

04:54 PM Mar 13, 2018 | |

ದಾವಣಗೆರೆ: ನಿವೇಶನ, ಹಕ್ಕುಪತ್ರ ವಿತರಣೆ ಹಾಗೂ ಅಂಬೇಡ್ಕರ್‌ ಭವನದ ಶಂಕುಸ್ಥಾಪನೆಗೆ ಒತ್ತಾಯಿಸಿ ಸೋಮವಾರ
ದಲಿತ ಸಂಘರ್ಷ ಸಮಿತಿ (ಪ್ರೊ| ಬಿ. ಕೃಷ್ಣಪ್ಪ) ನೇತೃತ್ವದಲ್ಲಿ ಹಳೇ ಚಿಕ್ಕನಹಳ್ಳಿ, ಯರಗುಂಟೆ ಸಂತ್ರಸ್ತರು ಜಿಲ್ಲಾ ಉಸ್ತುವಾರಿ
ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನಿವಾಸದ ಎದುರು ಪ್ರತಿಭಟಿಸಿದ್ದಾರೆ.

Advertisement

10 ವರ್ಷದಿಂದ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಿಂಭಾಗದ ಜಾಗದಲ್ಲಿ 300ಕ್ಕೂ ಹೆಚ್ಚು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ ಅನೇಕ ಕುಟುಂಬದವರು ಪ್ರತಿ ಮಳೆಗಾಲದಲ್ಲೂ ಇನ್ನಿಲ್ಲದ ತೊಂದರೆ ಅನುಭವಿಸುವುದು ಖಾಯಂ
ಎನ್ನುವಂತಾಗಿದೆ. ಅನೇಕ ಬಾರಿ ಜನರು ಸಂಕಷ್ಟಕ್ಕೆ ಒಳಗಾಗಿರುವುದನ್ನು ಮನಗಂಡ ಜಿಲ್ಲಾಡಳಿತ, ಚಿಕ್ಕನಹಳ್ಳಿ ಸಂತ್ರಸ್ತರ ಆಶ್ರಯ
ಯೋಜನೆಗಾಗಿ ತಾಲೂಕಿನ ವಡ್ಡಿನಹಳ್ಳಿಯ ಸರ್ವೇ ನಂಬರ್‌ 43ರಲ್ಲಿ 4 ಎಕರೆ ಜಮೀನು ಮಂಜೂರು ಮಾಡಿ ಇಲ್ಲಿಗೆ 2 ವರ್ಷ ಕಳೆದಿವೆ. ಆದರೆ, ಜಿಲ್ಲಾಡಳಿತದ ನಿರ್ಲಕ್ಷದಿಂದ ಈವರೆಗೆ ನಿವೇಶನ ಹಂಚಿಕೆಯಾಗಿಯೇ ಇಲ್ಲ. ಕೂಡಲೇ ನಿವೇಶನ ಹಂಚಿ, ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ 1ನೇ ವಾರ್ಡ್‌ನ ಯರಗುಂಟೆ ಗ್ರಾಮದ ಸರ್ಕಾರಿ ಜಾಗದಲ್ಲಿ 8 ವರ್ಷದಿಂದ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವರಿಗೆ ಸರ್ವೇ ನಂಬರ್‌ 33/2 ರಲ್ಲಿ 10 ಎಕರೆ 5 ಗುಂಟೆ ಜಮೀನು ನೀಡಲಾಗಿದ್ದರೂ ನಿವೇಶನದ ಹಕ್ಕುಪತ್ರ ನೀಡಿಲ್ಲ. ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು. ಅಂಬೇಡ್ಕರ್‌ ಸಮುದಾಯ ಭವನಕ್ಕೆ  0 ಕೋಟಿ ಮಂಜೂರಾಗಿ ಹಲವಾರು ವರ್ಷ ಕಳೆದರೂ ಜಿಲ್ಲಾಡಳಿತ ಸೂಕ್ತ ನಿವೇಶನ ಗುರುತು ಮಾಡದ ಕಾರಣಕ್ಕೆ ಈವರೆಗೆ ಸಮುದಾಯ ಭವನ ನಿರ್ಮಾಣ
ನನೆಗುದಿಗೆ ಬಿದ್ದಿದೆ. ಕೂಡಲೇ ಎಲ್ಲ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ತೆಗೆದುಕೊಂಡು ದಲಿತ ಸಮುದಾಯದವರಿಗೆ
ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಕಬ್ಬಳ್ಳಿ ಫರಸಪ್ಪ, ಕಬ್ಬಳ್ಳಿ ಮೈಲಪ್ಪ, ಯರಗುಂಟೆ ಅಣ್ಣಪ್ಪ, ಬೇಲೂರು
ಕುಮಾರ್‌, ಶಕೀಲಾಬಾನು, ಹನುಮಕ್ಕ, ಅಳಗವಾಡಿ ರವಿಬಾಬು, ಎಂ. ನಾಗರಾಜಪ್ಪ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next