Advertisement

ಮೀಸಲು ಅರಣ್ಯ ಜಾಗ ದಿಢೀರ್‌ ಒತ್ತುವರಿ

04:47 PM Dec 03, 2019 | Suhan S |

ಚಿಕ್ಕಮಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ಏಕಾಏಕಿ 60 ಜನರ ತಂಡ ಒತ್ತುವರಿ ಮಾಡಿ, ಗುಡಾರಗಳನ್ನು ಹಾಕಿ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಿರುವ ಘಟನೆ ಮಲ್ಲೇನಹಳ್ಳಿ ಸಮೀಪದ ತುರ್ಚೆಗುಡ್ಡದಲ್ಲಿ ಸೋಮವಾರ ನಡೆದಿದೆ.

Advertisement

ಮಲ್ಲೇನಹಳ್ಳಿ ವಿಭಾಗದ ಅರಿಶಿನಗುಪ್ಪೆ ಸರ್ವೆ ನಂಬರ್‌ 52ರಲ್ಲಿ ಒಟ್ಟು 275 ಎಕರೆ ಅರಣ್ಯ ಇಲಾಖೆಗೆ ಸೇರಿದ ಭೂಮಿ ಇದ್ದು, ಸೋಮವಾರ ಬೆಳಗ್ಗೆ 60 ಮಂದಿ ಭೂರಹಿತರು ಅಲ್ಲಿಗೆ ತೆರಳಿ ಗುಡಾರಗಳನ್ನು ಹಾಕಿದರಲ್ಲದೇ, ಅಂಬೇಡ್ಕರ್‌ ಪ್ರತಿಮೆಯೊಂದನ್ನು ಇಟ್ಟಿದ್ದಾರೆ.

ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪ್ರಾದೇಶಿಕ ಅರಣ್ಯ ವಿಭಾಗದ ವಲಯಾರಣ್ಯಾಧಿಕಾರಿ ಶೃತಿ ಹಾಗೂಸಿಬ್ಬಂದಿ, ಅರಣ್ಯ ಒತ್ತುವರಿ ಮಾಡಬಾರದೆಂದು ಮನವಿ ಮಾಡಿ, ಒತ್ತುವರಿ ಮಾಡಿದವರನ್ನು ತೆರವು ಮಾಡಬೇಕೆಂದು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರು ಸಹ ತೆರಳಿ ಒತ್ತುವರಿ ಮಾಡಿದ ಗುಂಪಿಗೆ ಜಾಗ ತೆರವು ಮಾಡಬೇಕೆಂದು ತಿಳಿ ಹೇಳಿದರು.

ಆದರೆ, ತಮಗೆ ಜಮೀನು ನೀಡುವವರೆಗೂ ಈ ಸ್ಥಳದಿಂದಹೊರ ಹೋಗುವುದಿಲ್ಲವೆಂದು ಪಟ್ಟು ಹಿಡಿದು ಕುಳಿತರು. ಹಾಗಾಗಿ, ಈ ಸಂಬಂಧ ಅರಣ್ಯ ಇಲಾಖೆ ಪೊಲೀಸ್‌ಇಲಾಖೆ ಹಾಗೂ ಜಿಲ್ಲಾಡಳಿತದ ಸಹಾಯವನ್ನು ಕೇಳಿದೆಯಲ್ಲದೇ, ಪರಿಸ್ಥಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದೆ. ತುರ್ಚೆ ಗುಡ್ಡದ 275 ಎಕರೆ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ. ಇಲ್ಲಿ ಯಾವುದೇ ರೀತಿ ಅರಣ್ಯೇತರ ಚಟುವಟಿಕೆಯನ್ನು ನಡೆಸಲು ಅವಕಾಶವಿಲ್ಲ. ಈ ಭೂರಹಿತರು ಹಿಂದಿನಿಂದಲೂ ತಮಗೆ ಜಮೀನು ನೀಡಬೇಕೆಂದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಾ ಬಂದಿದ್ದು, ಈವರೆಗೂ ಅವರ ಸಮಸ್ಯೆಗೆ ಪರಿಹಾರ ಹುಡುಕದೇ ಇರುವುದರಿಂದ ಅರಣ್ಯ ಪ್ರದೇಶಕ್ಕೆ ಹೋಗಿ ತಾವೇ 3-4 ಗುಡಾರಗಳನ್ನುಹಾಕಿದ್ದು, ತಮಗೆ ಜಮೀನು ನೀಡುವವರೆಗೂ ಇಲ್ಲೇ ಇರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್‌, ಪೊಲೀಸರು ಒತ್ತುವರಿತೆರವುಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಪ್ರಯತ್ನ ನಡೆಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅತಿಕ್ರಮವಾಗಿ ಗುಡಿಸಲು ಹಾಕಿರುವ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು,

Advertisement

ಪ್ರಕರಣ ದಾಖಲಾಗಿದೆ. ಅರಣ್ಯ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸರ್ವೆ ನಂ 52 ರಲ್ಲಿ 110 ಎಕರೆ ಅರಣ್ಯ ಪ್ರದೇಶ ಇದೆ. ಹಾಗಾಗಿ, ಅರಣ್ಯ ಕಾಯ್ದೆಒತ್ತುವರಿ ಮಾಡುವುದಕ್ಕೆ ಯಾರಿಗೂ ಅವಕಾಶವಿಲ್ಲ. ಅರಣ್ಯ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next