Advertisement

ಆರ್ ಬಿಐ ರೆಪೋ ದರದಲ್ಲಿ ಬದಲಾವಣೆ ಇಲ್ಲ, ಅಂದಾಜು ಜಿಡಿಪಿ ಶೇ.6.1ರಿಂದ ಶೇ.5ಕ್ಕೆ ಇಳಿಕೆ

09:45 AM Dec 06, 2019 | Team Udayavani |

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದೆ. ಅಲ್ಲದೇ ಅಂದಾಜು ಜಿಡಿಪಿ ಶೇ.ಶೇ.6.1ರಿಂದ 5ಕ್ಕೆ ಇಳಿಕೆ ಮಾಡಿದೆ.

Advertisement

ಇಂದು ನಡೆದ ಆರ್ ಬಿಐನ ಹಣಕಾಸು ನೀತಿ ಸಮಿತಿಯ(ಎಂಪಿಸಿ) ಸಭೆಯಲ್ಲಿ 2019-20ನೇ ಸಾಲಿನ ಜಿಡಿಪಿಯನ್ನು ಶೇ.6.1ರಿಂದ 5ಕ್ಕೆ ಇಳಿಕೆ ಮಾಡಲು ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ಅಂಕಿ ಅಂಶದಲ್ಲಿ ಜಿಡಿಪಿ ದರ ಶೇ.4.5ಕ್ಕೆ ಇಳಿಕೆಯಾಗಿತ್ತು. ಇದು ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ್ದಾಗಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ರೆಪೋ ದರವನ್ನು ಇಳಿಕೆ ಮಾಡಿತ್ತು. ಯಾವುದೇ ಆರ್ಥಿಕ ಅಭಿವೃದ್ಧಿಯ ಹೊರತಾಗಿಯೂ ಜನವರಿಯಿಂದ ಈವರೆಗೆ ಆರ್ ಬಿಐ ಐದು ಬಾರಿ ರೆಪೋ ದರ ಇಳಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಡಿಪಿ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವುದಾಗಿ ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next