Advertisement

ಅಂತರ್ಜಾತಿ ವಿವಾಹಿತರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ: ಡಾ. ಸಿದ್ದ

12:30 PM Mar 01, 2017 | |

ಬೆಂಗಳೂರು: ಅಂತರ್ಜಾತಿ ವಿವಾಹವಾದ ವರಿಗೆ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿದರೆ ಜಾತೀಯತೆ ಹೋಗಲಾಡಿಸಲು ಪ್ರಯತವಾಗಲಿದೆ ಎಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ  ಅಭಿಪ್ರಾಯ ಪಟ್ಟರು. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಡಾ.ಎಚ್‌.ಚಂದ್ರಶೇಖರ ಅವರು ಬರೆದ “ವಚನ ತವನಿಧಿ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ವಚನಕಾರರರು ಜಾತಿರಹಿತ ಹಾಗೂ ವರ್ಗರಹಿತ ಸಮಾಜದ ಕನಸನ್ನು ಕಂಡಿದ್ದರು. ಆದರೆ ದುರಾದೃಷ್ಟ ವಶಾತ್‌ ಇಂದಿಗೂ ಜಾತೀಯತೆ ಉಳಿದು ಕೊಂಡಿದೆ. ಹೀಗಾಗಿ ಅಂತರ್ಜಾತಿ ವಿವಾಹ ವಾದವರಿಗೆ ಉದ್ಯೋಗದಲ್ಲಿ ಶೇ.5 ಮೀಸ ಲಾತಿ ಹಾಗೂ ಅವರ ಮಕ್ಕಳಿಗೆ ಶಿಕ್ಷಣದಲ್ಲಿ ಶೇ.5 ಮೀಸಲಾತಿ ನೀಡಿದರೆ, ಜಾತಿ ರಹಿತ ಮೀಸಲಾತಿ ಹೆಚ್ಚಾಗಲಿದ್ದು, ಜಾತೀಯ ತೆಯೂ ಕೊನೆಗಾಣಿಸಲು ಪ್ರಯತ್ನವಾಗಲಿದೆ ಎಂದರು.

ಅಲ್ಲದೆ ದೇಶದಲ್ಲಿ ನಿಜವಾದ ಜಾತ್ಯಾ ತೀತ ಮನೋಭಾವ ಹೆಚ್ಚಾಗಬೇಕಾ ದರೆ ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು. ಅಂತರ್‌ ಜಾತಿ ವಿವಾಹವಾದವರಿಗೆ ಸರ್ಕಾರ ಆರ್ಥಿಕ, ಸಾಮಾಜಿಕ ಭದ್ರತೆ ಕಲ್ಪಿಸಬೇಕು. ಅದಲ್ಲದೆ ಸಮಸಮಾಜದ ಸುಧಾರಣೆಗೆ ವಚನಗಳ ಮೂಲಕ ಅಪಾರ ಕೊಡುಗೆ ನಿಡಿದ ವಚನಕಾರರನ್ನು ಗೌರವಿಸಬೇಕಾದಲ್ಲಿ ಸರ್ಕಾರ ಶೀಘ್ರವೇ ಮೌಡ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. 

ಕನ್ನಡದಲ್ಲೂ ವಚನದ ಮೂಲಕವೂ ದೇವರನ್ನು ಮಾತನಾಡಿಸಬಹುದು ಎಂದು ಕಲಿಸಿಕೊಟ್ಟವರು ವಚನಕಾರರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಇಂದು ವಚನ ಸಾಹಿತ್ಯದ ಅಧ್ಯಯನ ನಡೆಯುತ್ತಿಲ್ಲ. ಇತ್ತೀಚೆಗೆ ಕಪ್ಪತ್ತಗುಡ್ಡ ಹೋರಾಟ ಮುಂದುವರಿದಾಗ ವಚನದ ಮೂಲಕವೇ ಸರ್ಕಾರವನ್ನು ಎಚ್ಚರಿಸಿದ್ದೆ. ಯಾವುದೇ ವಿಚಾರ ಬರಲಿ ಅದಕ್ಕೊಂದು ಸಂಬಂಧ ಕಲ್ಪಿಸುವ ವಚನವಿದೆ. ಇದು ವಚನಕಾರರ ಚಿಂತನೆಗೆ ಸಾಕ್ಷಿ.
-ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿ, ಯಡೆಯೂರು-ಡಂಬಳ ಗದಗ ಸಂಸ್ಥಾನ ಮಠ

Advertisement

Udayavani is now on Telegram. Click here to join our channel and stay updated with the latest news.

Next