Advertisement
ಪ್ರೊ| ಬಿ. ಕೃಷ್ಣಪ್ಪ ಅವರು ಹತ್ತಾರು ಬಗೆಯ ಸಾಮಾಜಿಕ ಹೋರಾಟಗಳನ್ನು ಸಂಘಟಿಸಿದವರು. ದಲಿತ ವ್ಯಕ್ತಿಗಳ ಕೊಲೆ ವಿರುದ್ಧ, ಅತ್ಯಾಚಾರಗಳ ವಿರುದ್ಧ ಪ್ರತಿಭಟನೆ, ಚಂದ್ರಗುತ್ತಿ ಬೆತ್ತಲೆ ಸೇವೆ ರದ್ದು, ಸಿದ್ಲಿಪುರದ ಭೂ ಹೋರಾಟ ಸೇರಿದಂತೆ ಅಸ್ಪೃಶ್ಯತೆ, ಹೆಣ್ಣುಮಕ್ಕಳ ಗೌರವ, ಜಾತಿ ನಿರ್ಮೂಲನೆ, ಸಾರ್ವಜನಿಕ ಸ್ಥಳಗಳ ಪ್ರವೇಶ, ಭೂಸುಧಾರಣೆ ಸೇರಿದಂತೆ ವೈವಿಧ್ಯಮಯ ವಿಷಯಗಳಲ್ಲಿ ಚಳವಳಿಗಳನ್ನು ರೂಪಿಸಿದವರು ಎಂದರು.
Related Articles
Advertisement
ವಿಶ್ವವಿದ್ಯಾಲಯಗಳಲ್ಲಿರುವ ಪ್ರೊ| ಕೃಷ್ಣಪ್ಪ, ಜಗಜೀವನ್‌ರಾಂ, ಬಸವಣ್ಣ, ಅಂಬೇಡ್ಕರ್ ರಂತಹ ಅಧ್ಯಯನ ಪೀಠಗಳು ಕ್ಯಾಂಪಸ್ ನಿಂದ ಹೊರಬಂದು ಸಮಾಜದಲ್ಲಿ ಹಲವು ವಿಧದ ಶೋಷಣೆಗಳ ವಿರುದ್ಧ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.
ವಿವಿಯ ಕುಲಪತಿ ಪ್ರೊ| ಬಿ. ಪಿ. ವೀರಭದ್ರಪ್ಪ ಮಾತನಾಡಿ, ಪ್ರೊ| ಬಿ. ಕೃಷ್ಣಪ್ಪ ಅವರು ಹರಿಹರ, ಚಿತ್ರದುರ್ಗಗಳಲ್ಲಿ ನಡೆದ ಚಳವಳಿಗಳ ವೇದಿಕೆಯಿಂದಲೇ ದಲಿತರಿಗೆ ದೇವಾಲಯಗಳ ಬದಲಿಗೆ ಸಂಸತ್ತು, ಶಾಸನಸಭೆಗಳಿಗೆ ಪ್ರವೇಶಕ್ಕೆ ಕರೆ ಕೊಟ್ಟಿದ್ದನ್ನು ನಾನು ಸ್ವತಃ ನೋಡಿದ್ದೇನೆ.ಶಿಕ್ಷಿತರಲ್ಲೇ ಹೆಚ್ಚಿನ ಮೌಡ್ಯಆಚರಣೆ, ದುರಾಸೆಯ ಪ್ರವೃತ್ತಿಗಳು,ಅಸಮಾನತೆಯಮನೋಭಾವನೆಗಳು ಇರುವ ಈ ಕಾಲದಲ್ಲಿಕೃಷ್ಣಪ್ಪ ಅವರಂತಹ ಹೋರಾಟಗಾರರ ಅವಶ್ಯಕತೆಯಿದೆ. ಹೀಗಾಗಿಯೇ ಅವರನ್ನು ನಾವು ಕರ್ನಾಟಕದ ಅಂಬೇಡ್ಕರ್‌ಎಂದು ಹೆಮ್ಮೆಯಿಂದ ಕರೆಯುತ್ತೇವೆ ಎಂದರು. ವಿವಿಯ ಪರೀûಾಂಗ ಕುಲಸಚಿ ಪ್ರೊ| ಪಿ. ಕಣ್ಣನ್, ಪ್ರೊ| ಬಿ. ಕೃಷ್ಣಪ್ಪ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ| ಶಿವಾನಂದ ಕೆಳಗಿನಮನಿ, ಕನ್ನಡ ಭಾರತಿ ವಿಭಾಗದಪ್ರೊ| ಪ್ರಶಾಂತ್‌ನಾಯ್ಕ, ಡೊಮಿನಿಕ್ ಇನ್ನಿತರರು ಇದ್ದರು.