Advertisement

Karnataka: ಮೀನುಗಾರರ ಮಕ್ಕಳಿಗೆ ಕಾಲೇಜುಗಳಲ್ಲಿ ಮೀಸಲಾತಿ ಪ್ರಸ್ತಾವ

11:23 PM Dec 11, 2024 | Team Udayavani |

ಬೆಳಗಾವಿ: ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿ ರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮೀನುಗಾರಿಕೆ ಕಾಲೇಜುಗಳ ಪ್ರವೇ ಶಾತಿಯಲ್ಲಿ ಮೀಸಲಾತಿ ನೀಡಲು ಸರಕಾರ ಚಿಂತನೆ ನಡೆಸಿದೆ.

Advertisement

ಈ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆ ಇದ್ದರೂ ಸರಕಾರದ ಕಡೆಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿರಲಿಲ್ಲ. ಅಲ್ಲದೆ, ಕೆಲ ತಾಂತ್ರಿಕ ಅಡಚಣೆಗಳೂ ಇದ್ದವು. ಈ ಗೊಂದಲಗಳನ್ನು ನಿವಾರಿಸಿ ಮೀನುಗಾರಿಕ ಕಾಲೇಜುಗಳ ಪ್ರವೇಶಾತಿಯಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಈಗ ಭರವಸೆ ಸಿಕ್ಕಿದೆ.

ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಅವರು ವಿಧಾನಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಲಿಖೀತ ಉತ್ತರ ಕೊಟ್ಟಿರುವ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ, ಕೃಷಿ ಮತ್ತು ಕೃಷಿ ಕಾರ್ಮಿಕ ಮಕ್ಕಳಿಗೆ ಕೃಷಿ ಹಾಗೂ ಪೂರಕ ವಿವಿಗಳ ಪದವಿ ಕೋರ್ಸ್‌ಗ ಳ ಪ್ರವೇಶಾತಿಗೆ ಕಾಲೇಜುಗಳಲ್ಲಿ ಶೇ. 50 ಮೀಸಲಾತಿ ಕಲ್ಪಿಸಲಾಗಿದೆ.

ಆದರೆ, ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಯಾವುದೇ ಭೂ ದಾಖಲಾತಿ ಇಲ್ಲದಿರುವುದಿಂದ ಕೃಷಿ ಸಂಬಂಧಿತ‌ ಕೂಲಿ ಕಾರ್ಮಿಕರ ಪ್ರಮಾಣ ಪತ್ರ ಸಿಗದೆ ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಮೀನುಗಾರರ ಮಕ್ಕಳಿಗೆ ಮೀನು ಕೃಷಿಕರು / ಮೀನುಗಾರ ವ್ಯವಸಾಯ ಪ್ರಮಾಣ ಪತ್ರ ನೀಡುವ ಬಗ್ಗೆ ಪರಿಗಣಿಸಬಹುದಾದ ಮಾನದಂಡಗಳ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಮುದ್ರ ಕೊರೆತ: 16.35 ಕೋಟಿ ರೂ.
ಸಮುದ್ರ ಕೊರೆತಕ್ಕೆ ಸಂಬಂಧಿಸಿದಂತೆ ಕಿರಣ್‌ ಕುಮಾರ್‌ಕೊಡ್ಗಿ ಪ್ರಶ್ನೆಗೆ ಉತ್ತರಿಸಿರುವ ಸಚಿವ ವೈದ್ಯ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 16.35 ಕೋಟಿ ರೂ.ಗಳ ಮೂರು ಸಮದ್ರ ಕೊರೆತ ಪ್ರತಿಬಂಧಕ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯ 11.41 ಕೋಟಿ ರೂ.ಗಳ ಕಾಮಗಾರಿ ಪೂರ್ಣವಾಗಿದೆ. 2024-25ರ ಸಾಲಿನಲ್ಲಿ 1.22 ಕೋಟಿ ರೂ. ಅನುದಾನ ಮೀಸಲಿಡಲಾಗಿ¨ರಕಾ‌ರ್ಕಾರ ಕೈಗೊಂಡ ಕ್ರಮಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬ್ರೇಕ್‌ ವಾಟರ್‌ನ ನಿರ್ವಹಣೆಗೆ 20 ಲಕ್ಷ ರೂ. ಅನುದಾನದ ಆವಶ್ಯಕತೆಯಿದ್ದು ಈ ಅನುದಾನವನ್ನು ಮೀನುಗಾರಿಕೆ ಇಲಾಖೆ ಒದಗಿಸಿದ ಅನಂತರ ಬ್ರೇಕ್‌ ವಾಟರ್‌ನ ನಿರ್ವಹಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Advertisement

ಬಸ್‌ ಪುನರಾರಂಭ
ಕುಂದಾಪುರ ವಿಧಾನ ಸಭಾ ವ್ಯಾಪ್ತಿಯಲ್ಲಿ ಕೋವಿಡ್‌ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿದ್ದ 15 ಸುತ್ತುವಳಿಗಳನ್ನು ಕೆಎಸ್‌ಆರ್‌ಟಿಸಿ ಪುನರಾರಂಭಿಸಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಕುಂದಾಪುರದ ಶಾಸಕ ಕಿರಣ್‌ ಕುಮಾರ್‌ಕೊಡ್ಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್‌ -19 ಹಿನ್ನೆಲೆಯಲ್ಲಿ ವಿರಳ ಜನಸಂದಣಿ ಇದ್ದುದ್ದರಿಂದ ಸ್ಥಗಿತಗೊಳಿಸಲಾಗಿದ್ದ 6 ಅನುಸೂಚಿಗಳಲ್ಲಿರುವ 43 ಏಕ ಸುತ್ತುವಳಿಗಳಲ್ಲಿ 28 ಏಕ ಸುತ್ತುವಳಿಗಳನ್ನು ಪುನರಾರಂಭಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next