Advertisement

ಮಂಗಳೂರು ಸಹಿತ ಹನ್ನೊಂದು ಮಹಾನಗರ ಪಾಲಿಕೆ : ಮೇಯರ್, ಉಪಮೇಯರ್ ಮೀಸಲಾತಿ ನಿಗದಿ

10:04 AM Dec 27, 2019 | Hari Prasad |

ಬೆಂಗಳೂರು: ರಾಜ್ಯದಲ್ಲಿನ ಹನ್ನೊಂದು ಮಹಾನಗರ ಪಾಲಿಕೆಗಳ 22ನೇ ಅವಧಿಗೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ರಾಜ್ಯ ಸರಕಾರವು ಇಂದು ಅಧಿಕೃತ ಪ್ರಕಟನೆಯನ್ನು ಹೊರಡಿಸಿದೆ.

Advertisement

ಸರಕಾರ ಪ್ರಕಟಿಸಿರುವ ಮೀಸಲಾತಿ ನಿಯಮದ ವಿವರಗಳು ಈ ಕೆಳಗಿನಂತಿವೆ:

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ಸಾಮಾನ್ಯ ವರ್ಗದ (G) ಪಾಲಾಗಿದೆ ಮತ್ತು ಉಪಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗ ಮಹಿಳೆಗೆ (GW) ಮೀಸಲಿರಿಸಲಾಗಿದೆ.

ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪಮೇಯರ್ ಹುದ್ದೆ ಸಾಮಾನ್ಯ ವರ್ಗದ ಪಾಲಾಗಿದೆ (G).

ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಪರಿಶಿಷ್ಟ ಜಾತಿ (SC) ಮತ್ತು ಉಪಮೇಯರ್ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ (STW) ಮೀಸಲಿರಿಸಲಾಗಿದೆ.

Advertisement

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ (SCW) ಮತ್ತು ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ (G) ಮೀಸಲಾಗಿದೆ.

ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ (G) ನಿಗದಿಪಡಿಸಲಾಗಿದ್ದರೆ ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ (SCW) ಮೀಸಲಿಡಲಾಗಿದೆ.

ಹುಬ್ಬಳ್ಳಿ – ಧಾರವಾಢ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ (GW) ಮೀಸಲಿಡಲಾಗಿದೆ ಮತ್ತು ಉಪಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ (G) ಮೀಸಲಿಡಲಾಗಿದೆ.

ಕಲಬುರಗಿ ಮೇಯರ್ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಪರಿಶಿಷ್ಟ ಪಂಗಡದ (SC) ಅಭ್ಯರ್ಥಿಗೆ ನಿಗದಿಯಾಗಿದೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಪ್ರವರ್ಗದವರಿಗೆ (BCA) ನಿಗದಿಯಾಗಿದೆ.

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ಹಿಂದುಳಿದ ವರ್ಗ ಎ ಪ್ರವರ್ಗದ ಮಹಿಳೆಗೆ (BCAW) ನಿಗದಿಯಾಗಿದ್ದರೆ ಉಪಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ (SC) ನಿಗದಿಯಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿನ ಮೇಯರ್ ಹುದ್ದೆ ಹಿಂದುಳಿದ ವರ್ಗ ಬಿ ಪ್ರವರ್ಗದ ಮಹಿಳೆಗೆ (BCBW) ನಿಗದಿಯಾಗಿದೆ ಮತ್ತು ಉಪಮೇಯರ್ ಹುದ್ದೆ ಸಾಮಾನ್ಯ ವರ್ಗದ (G) ಮಹಿಳೆಗೆ ನಿಗದಿಯಾಗಿದೆ.

ತುಮಕೂರು ಮಹಾನಗರ ಪಾಲಿಕೆಯಲ್ಲಿನ ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗದ ಮಹಿಳೆಗೆ (GW) ನಿಗದಿಪಡಿಸಲಾಗಿದೆ ಮತ್ತು ಉಪಮೇಯರ್ ಹುದ್ದೆಯನ್ನು ಹಿಂದುಳಿದ ವರ್ಗ ಎ ಪ್ರವರ್ಗದ ಮಹಿಳೆಗೆ (BCAW) ನಿಗದಿಪಡಿಸಲಾಗಿದೆ.

ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ಹಿಂದುಳಿದ ವರ್ಗ ಎ ಪ್ರವರ್ಗದವರಿಗೆ (BCA) ನಿಗದಿಯಾಗಿದೆ ಹಾಗೂ ಉಪಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ (G) ನಿಗದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next