ತುಮಕೂರು: ಪಂಚಮಸಾಲಿ ಲಿಂಗಾಯತರಿಗೆ ರಾಜ್ಯ ಸರ್ಕಾರ “2ಎ’ ಮೀಸಲಾತಿ ನೀಡಲು ಒತ್ತಾಯಿಸಿ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ತುಮಕೂರಿಗೆ ಆಗಮಿಸುತ್ತಲೇ ನಗರದಲ್ಲಿ ಬುಧವಾರ ಸಂಜೆ ಪಂಚಮಸಾಲಿ ಮುಖಂಡರ ಮಹತ್ವದ ಸಭೆ ನಡೆಯಿತು.
ನಗರದ ಶಿರಾ ಗೇಟ್‌ನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಹೋರಾಟದ ಮುಂದಿನ ಕಾರ್ಯಯೋಜನೆ ಬಗ್ಗೆ ಚರ್ಚೆ ನಡೆಸಿದರು. ಕಳೆದ ಜ. 14ರಿಂದ ಪಂಚಮಸಾಲಿ ಲಿಂಗಾಯತ ಸಮುದಾಯ ವನ್ನು ಪ್ರವರ್ಗ 2 ಎ ಸೇರಿಸಬೇಕೆಂದು ಆಗ್ರಹಿಸಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಪಾದಯಾತ್ರೆ ತುಮಕೂರು ಜಿಲ್ಲೆಗೆ ಆಗಮಿಸಿದ್ದು ಬೆಂಗಳೂರಿನತ್ತ ಪ್ರಯಾಣ ಬೆಳೆಸಬೇಕಿದೆ.
ಬೆಂಗಳೂರಿನಲ್ಲಿ ಪಂಚಮಸಾಲಿ ಸಮುದಾಯದ ಬೃಹತ್ ಸಭೆ ನಡೆಸುವ ಕುರಿತು ಬುಧವಾರ ಸಂಜೆ ಸಮುದಾಯದ ಮುಖಂಡರ ಸಭೆ ನಡೆದಿದ್ದು ಫೆ.21ರಂದು ಬೆಂಗಳೂರಿನ ನ್ಯಾಷನಲ್ ಮೈದಾನದಲ್ಲಿ ಬೃಹತ್ ಸಮಾವೇಶದ ಮೂಲಕ ಮೀಸಲಾತಿಗೆ ಹಕ್ಕೊತ್ತಾಯ ಮಾಡಲಾಗುವುದೆಂದು ಶ್ರೀಬಸವಮೃತ್ಯುಂಜಯಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ:18 ವರ್ಷದ ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ… ಸಾಯೋ ಮುಂಚೆ ಭರ್ಜರಿ ಡಾನ್ಸ್
ಶ್ರೀವಚನಾನಂದ ಸ್ವಾಮೀಜಿ, ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್, ಶಾಸಕರಾದ ಬಸವರಾಜಪಾಟೀಲ್ ಯತ್ನಾಳ್, ಲಕ್ಷ್ಮೀ ಹೆಬ್ಟಾಳ್ಕರ್, ಅರವಿಂದ್ ಬೆಲ್ಲದ್, ಗಣೇಶ್ ಹುಕ್ಕೇರಿ, ಅರುಣ್‌ಪೂಜಾರ್, ಮಹೇಶ್ ಕುಮಠಹಳ್ಳಿ, ಕಳಕಪ್ಪ ಬಂಡಿ, ಮಾಜಿ ಶಾಸಕರಾದ ಶಿವಶಂಕರ್, ಶಿವಾನಂದಪಾಟೀಲ್ ಇತರರು ಇದ್ದರು