Advertisement

ಇನ್ನು ಆ್ಯಸಿಡ್‌ ದಾಳಿ ಸಂತ್ರಸ್ತರಿಗೂ ಮೀಸಲಾತಿ

03:45 AM Jun 22, 2017 | Team Udayavani |

ಹೊಸದಿಲ್ಲಿ: ಮಹತ್ವದ ನಿರ್ಧಾರವೊಂದರಲ್ಲಿ, ಕೇಂದ್ರ ಸರಕಾರ ಆ್ಯಸಿಡ್‌ ದಾಳಿಗೊಳಗಾದವರಿಗೂ ಮೀಸಲು, ಭಡ್ತಿಯಲ್ಲಿ ಅನುಕೂಲ ಕಲ್ಪಿಸಲು ಮುಂದಾಗಿದೆ. ಇವರೊಂದಿಗೆ ಮಾನಸಿಕ ಸಮಸ್ಯೆ, ಬೌದ್ಧಿಕ ಅಸಾಮರ್ಥ್ಯ ಹೊಂದಿದವರಿಗೂ ಈ ಮೀಸಲಾತಿ ಅನ್ವಯಿಸಲಿದೆ. 

Advertisement

ಈ ಮೀಸಲಾತಿಯನ್ನು ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಕರಡು ಮೀಸಲಾತಿ ನೀತಿಯಲ್ಲಿ ಪ್ರಸ್ತಾವಿಸಿದೆ. ಈ ಮೀಸಲಾತಿ ಕೇಂದ್ರ ಸರಕಾರದ ಕಚೇರಿ ಸಹಾಯಕರಿಂದ ಲೋಕಸೇವಾ ಆಯೋಗದ ಅಧಿಕಾರಿಗಳವರೆಗೆ ಅನ್ವಯವಾಗಲಿದೆ. 

ಕರಡು ಪ್ರಸ್ತಾವನೆಯ ಪ್ರಕಾರ, ಒಂದು ವೇಳೆ ನೇರ ನೇಮಕಾತಿ ಇದ್ದ ಪಕ್ಷದಲ್ಲಿ ಒಟ್ಟು ಪ್ರತಿ ವಿಭಾಗಗಳ ಖಾಲಿ ಹುದ್ದೆಗಳಲ್ಲಿ ಶೇ.4ರಷ್ಟು ಅಶಕ್ತರಿಗೆ ಮೀಸಲಾಗಿರಿಸಲಾಗುತ್ತದೆ. ಇದರಲ್ಲಿ ದೃಷ್ಟಿ ಹೀನರು, ಅಲ್ಪ ದೃಷ್ಟಿ ಹೊಂದಿರುವವರು, ಕಿವುಡು, ಸ್ನಾಯು ಕುಬjತೆ, ಇತ್ಯಾದಿ ಊನತೆ ಹೊಂದಿರುವವರೊಂದಿಗೆ ಆ್ಯಸಿಡ್‌ ದಾಳಿ ಸಂತ್ರಸ್ತರಿಗೂ ಮೀಸಲಾತಿ ದೊರಕಲಿದೆ ಎಂದು ಇಲಾಖೆ ಹೇಳಿದೆ. ಆದರೆ ವಿಕಲಾಂಗ ವ್ಯಕ್ತಿಗಳಿಗೆ ಭಡ್ತಿ, ಮೀಸಲಾತಿ ನೀಡುವ ಕುರಿತಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಕೇಂದ್ರದ ಈ ಪ್ರಸ್ತಾವನೆ ಪರಿಣಾಮ ಏನಾಗಬಹುದು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next