Advertisement

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

02:22 AM Apr 30, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಒಬಿಸಿ ಸಮುದಾಯದ ವರಿಗಾಗಿ ಇರುವ ಮೀಸಲು ರದ್ದು ಮಾಡಿ ಅಲ್ಪಸಂಖ್ಯಾಕರಿಗೆ ನೀಡಲು ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅದರ ವಿರುದ್ಧ ಬಿಜೆಪಿಯ ನಾಯ ಕರು ಹೊಸದಿಲ್ಲಿಯಲ್ಲಿರುವ ಕಾಂಗ್ರೆಸ್‌ ಪ್ರಧಾನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮೀಸಲಾತಿ ವ್ಯವಸ್ಥೆ ಯನ್ನು ಕಿತ್ತುಕೊಳ್ಳುವ ಪ್ರಯತ್ನಕ್ಕೆ ತಕ್ಕ ಉತ್ತರ ನೀಡಲಿ ದ್ದಾರೆ ಎಂದು ದಿಲ್ಲಿ ಬಿಜೆಪಿ ಘಟಕದ ನಾಯಕ ವೀರೇಂದ್ರ ಸಚ್‌ದೇವ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾಕಾರರು ರಾಹುಲ್‌ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರ ವಿರುದ್ಧ ಘೋಷಣೆ ಕೂಗಿದ್ದಾರೆ.

Advertisement

ಇದೇ ವೇಳೆ “ಸಂವಿಧಾನವನ್ನು ತಿದ್ದುಪಡಿ ಮಾಡಿ, ಮೀಸಲಾತಿ ರದ್ದು ಪಡಿಸಬೇಕೆಂಬ ಆರ್‌ಎಸ್‌ಎಸ್‌ನ ದಶಕಗಳ ಪಿತೂರಿಯನ್ನು ಯಶಸ್ವಿಯಾಗಿಸುವುದಕ್ಕಾ ಗಿಯೇ ಬಿಜೆಪಿ 400 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಬಯಸುತ್ತಿದೆ’ ಹೀಗೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳಿಗೆ ಸಂಬಂಧಿ ಸಿದ ಪ್ರತಿಕೆ ವರದಿಗಳನ್ನು ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ. ಅಲ್ಲದೇ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲರದಲ್ಲೂ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಮೀಸಲು ಕಿತ್ತೂಗೆಯುವುದೇ ಬಿಜೆಪಿ ಉದ್ದೇಶ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next