Advertisement

ಕಾಪು ಜಾತಿಗೆ ಮೀಸಲಾತಿ

12:30 AM Jan 24, 2019 | Team Udayavani |

ಅಮರಾವತಿ: ಇತ್ತೀಚೆಗೆ ಜಾರಿಗೊಂಡ ಸಾಮಾನ್ಯ ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಅಡಿಯಲ್ಲಿ ಆಂಧ್ರಪ್ರದೇಶ ಸರ್ಕಾರ, ಅಲ್ಲಿನ ಪ್ರಬಲ ಜಾತಿಯಾದ “ಕಾಪು’ವಿಗೆ ಶೇ.5ರಷ್ಟು ಮೀಸಲಾತಿ ಕಲ್ಪಿಸಿದೆ. ಮಂಗಳವಾರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ವಿಚಾರ ತಿಳಿಸಿದ್ದಾರೆ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲೇ, ನಾಯ್ಡು ನೇತೃತ್ವದ ಟಿಡಿಪಿ, ಕಾಪು ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಶೇ. 5ರ ಮೀಸಲಾತಿ ಕಲ್ಪಿಸುವ ಆಶ್ವಾಸನೆ ನೀಡಿತ್ತು. 2017ರ ಡಿ. 2ರಂದು ಈ ಕುರಿತಂತೆ ಮಂಡಿಸಲಾಗಿದ್ದ ಮಸೂದೆಗೆ ಆಂಧ್ರಪ್ರದೇಶ ವಿಧಾನಸಭೆ ಅನುಮೋದನೆ ನೀಡಿತ್ತು. ಆದರೆ, ಈ ಮೀಸಲಾತಿಗೆ ಕೇಂದ್ರ ಅನುಮತಿ ನೀಡಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next