Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕರಾದ ಸಿ.ಜೆ. ಮೋಹನ್ ಮೌರ್ಯ, ಕಳೆದ 68 ವರ್ಷಗಳ ಕಾಲ ಆಡಳಿತ ನಡೆಸಿದ ಸರಕಾರಗಳು ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಘೋರ ಅನ್ಯಾಯವನ್ನು ಮಾಡಿವೆ ಎಂದು ಆರೋಪಿಸಿದರು.ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮುಂದೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿ ಅಗತ್ಯ ಸಾûಾÂಧಾರಗಳನ್ನು ಹಾಜರುಪಡಿಸಬೇಕು, ಸುಪ್ರೀಂಕೋರ್ಟ್ ಆದೇಶದಲ್ಲಿ ಹೇಳಿದ ನ್ಯೂನತೆಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಸರಕಾರ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಹೊಸ ಕಾನೂನನ್ನು ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಮಂಡಿಸಿ ಪಾಸು ಮಾಡಬೇಕು, ಲೋಕಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಬಡ್ತಿ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಸಂವಿಧಾನದ 117 ನೇ ತಿದ್ದುಯಪಡಿ ವಿಧೇಯಕವನ್ನು ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿ ಆದೇಶ ಹೊರಡಿಸಬೇಕು ಮತ್ತು ಮೀಸಲಾತಿಯನ್ನು ಸಂರಕ್ಷಿಸಲು ಮೀಸಲಾತಿ ವಿಧೇಯಕಗಳನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಬೇಕೆಂದು ಮೋಹನ್ ಮೌರ್ಯ ಒತ್ತಾಯಿಸಿದರು.
ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಪ್ರಾತಿನಿಧ್ಯ ನೀಡುವುದು ಪ್ರಜಾಪ್ರಭುತ್ವದ ಮೂಲತತ್ವ. ಸಾವಿರಾರು ವರ್ಷಗಳಿಂದ ಸಾಮಾಜಿಕ ಶೈಕ್ಷಣಿಕ, ಅಸಮಾನತೆಗೆ ತುತ್ತಾಗಿರುವ ಸಮುದಾಯಗಳಿಗೆ ಎಲ್ಲ ಹಂತದಲ್ಲೂ ಸಮಾನ ಪ್ರಾತಿನಿಧ್ಯ ಒದಗಿಸಿಕೊಡುವುದೇ ಮೀಸಲಾತಿಯ ಉದ್ದೇಶ ಮತ್ತು ಸಂವಿಧಾನದ ಆಶಯ. ಆದರೆ ಇಂತಹ ಅನ್ಯಾಯ, ಅಸಮಾನತೆಯನ್ನು ಸರಿಪಡಿಸಬೇಕಾಗಿರುವ ಸಂದರ್ಭಗಳಲ್ಲಿ 2017ರಂದು ಫೆ. 9ರಂದು ಸರ್ವೋಚ್ಚ ನ್ಯಾಯಾಲಯ ಎಸ್‌ಸಿಗಳಿಗೆ ಶೇ.15 ಮತ್ತು ಎಸ್‌ಟಿಗಳಿಗೆ ಶೇ.3ರಷ್ಟು ಭಡ್ತಿಯಲ್ಲಿ ಮೀಸಲಾತಿ ನೀಡುವ ಕರ್ನಾಟಕ ರಾಜ್ಯ ಸರಕಾರದ 2012 ರ ಆದೇಶವನ್ನು ರದ್ದುಪಡಿಸಿದೆ.