Advertisement
ಮನುಷ್ಯನ ದೇಹದಲ್ಲಿ ಅಡಗಿರಬಹುದಾದ ಎಚ್‌ಐವಿ ಸೋಂಕಿತ ಜೀವಕಣಗಳನ್ನು ಹುಡುಕಿ ನಾಶಪಡಿಸುವಂಥ ವಿಶಿಷ್ಟ ತಂತ್ರಗಾರಿಕೆ ಇದಾಗಿದೆ. “ನೇಚರ್ ಕಮ್ಯೂನಿಕೇಷನ್ಸ್’ ಎಂಬ ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸುವ ನಿಯತಕಾಲಿಕೆಯಲ್ಲಿ ಈ ಕುರಿತ ಲೇಖನ ಪ್ರಕಟವಾಗಿದೆ.
ಇದೊಂದು ರೀತಿಯಲ್ಲಿ ಮುಳ್ಳನ್ನು ಮುಳ್ಳಿನಿಂದಲೇ ತಗೆಯುವಂಥ ಪ್ರಕ್ರಿಯೆ. ನಿರ್ದಿಷ್ಟ ಮಾನವನ ದೇಹದ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯಡಿ ಸಹಜವಾಗಿ ಉತ್ಪತ್ತಿಯಾಗುವ ಆರೋಗ್ಯವಂತ ಜೀವಕಣಗಳನ್ನು ಸೂಕ್ತ ಔಷಧಿಗಳ ಮೂಲಕ ಹುರಿಗೊಳಿಸಿ, ಅದೇ ದೇಹದ ನಾನಾ ಅಂಗಾಂಗಗಳಲ್ಲಿ ಹುದುಗಿಕೊಂಡಿರುವ ಎಚ್‌ಐವಿ ಸೋಂಕಿತ ಜೀವಕಣಗಳನ್ನು ಪತ್ತೆ ಹಚ್ಚಿ ಕೊಲ್ಲುವಂಥ ತಂತ್ರಗಾರಿಕೆ ಇದಾಗಿದೆ. ಸದ್ಯಕ್ಕಿದು ಸೈದ್ಧಾಂತಿಕ ಮಾದರಿಯಲ್ಲಿದ್ದು, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಂದುಕೊಂಡಂತೆ ಇದು ಯಶಸ್ವಿಯಾದರೆ ಎಚ್‌ಐವಿ ನಿರ್ಮೂಲನೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ. ಈ ಹೊಸ ತಂತ್ರಗಾರಿಕೆಯಿಂದ ಎಚ್‌ಐವಿ ಸೋಂಕಿತರಲ್ಲಿನ ಎಚ್‌ಐವಿ ವೈರಾಣುಗಳನ್ನು ಗಣನೀಯ ಮಟ್ಟದಲ್ಲಿ ಇಳಿಕೆ ಮಾಡಲು ಸಹಾಯವಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ವೈರಾಣುಗಳನ್ನು ನಾಶಪಡಿಸಲು ಪ್ರಾಯಶಃ ಇದರಿಂದ ಸಾಧ್ಯವಿದೆ. ಈ ತಂತ್ರಗಾರಿಕೆ ಭವಿಷ್ಯದಲ್ಲಿ ಮತ್ತಷ್ಟು ಹೊಸ ವೈದ್ಯಕೀಯ ತಂತ್ರಗಾರಿಕೆಗಳ ಆವಿಷ್ಕಾರಕ್ಕೆ ನಾಂದಿ ಹಾಡಬಹುದು.
– ಡಾ. ಜೋಸ್‌ಲೀನ್ ಕಿಮ್,
ಸಹಾಯಕ ಪ್ರಾಧ್ಯಾಪಕ, ಕ್ಯಾಲಿಫೋರ್ನಿಯಾ ವಿವಿ