ಚಾಮಾರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಅರಣ್ಯದಲ್ಲಿ ಇತ್ತೀಚೆಗೆ ಸಂಶೋಧಕರಿಗೆ ಅಪರೂಪದ ಮುಂಗುಸಿಯೊಂದು ಪತ್ತೆಯಾಗಿದೆ.
ನೇಚರ್ ಕನ್ಸರ್‌ವೆàಷನ್ ಫೌಂಡೇಶನ್ ನ ವನ್ಯ ಜೀವಿ ಸಂರಕ್ಷಕ ಸಂಜಯ್ ಗುಬ್ಬಿ ನೇತೃತ್ವದ ತಂಡ ಸಂಶೋಧನೆಗಿಳಿದಾಗ ಅಪರೂಪದ ಮುಂಗುಸಿ ಇರುವುದು ಕಂಡು ಬಂದಿದೆ.
ಮಾಂಸಹಾರಿ ಜಾತಿಯ ಅಪರೂಪದ ಮುಂಗುಸಿಯು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕಂಡು ಬಂದಿವೆ ಹೊರತು ಕರ್ನಾಟಕದ ಬೇರೆ ಭಾಗದಲ್ಲಿ ಇದುವರೆಗೆ ಪತ್ತೆಯಾಗಿರಲಿಲ್ಲ.
ಚಿರತೆಗಳ ಕುರಿತು ಅಧ್ಯಯನ ನಡೆಸಲು ಹಲವು ಕಡೆ ಕ್ಯಾಮರಾಗಳನ್ನು ಅಳವಡಿಸಿದ್ದ ವೇಳೆ ಕಂದು ಬಣ್ಣದ ಮುಂಗುಸಿಯ ಸಂಚಾರ ಸೆರೆಯಾಗಿದೆ.
ಶಂಕುವಿನಾಕಾರದ ತುದಿ ಇರುವ ಬಾಲ ಕಂದು ಬಣ್ಣದ ಮುಂಗುಸಿಯ ವಿಶೇಷತೆಯಾಗಿದ್ದು, ಉಳಿದಂತೆ ಆಕಾರದಲ್ಲಿ ಸಾಮಾನ್ಯ ಮುಂಗುಸಿಯನ್ನೇ ಹೋಲುತ್ತದೆ.
ಸಾಮಾನ್ಯವಾಗಿ ಮುಂಗುಸಿಗಳು ಕೀಟಗಳು, ಏಡಿಗಳು, ಸಣ್ಣ ಸರೀಸೃಪಗಳು,, ಮಣ್ಣಿನ ಹುಳಗಳು ಮತ್ತು ಪಕ್ಷಿಗಳನ್ನು ತಿಂದು ಬದುಕುತ್ತವೆ.