Advertisement

ಮಧ್ಯಪ್ರದೇಶದಲ್ಲಿ ಡೈನೋಸಾರ್‌ಗಳ 256 ಮೊಟ್ಟೆ ಪತ್ತೆ!

09:28 PM Jan 21, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಧರ್‌ ಜಿಲ್ಲೆಯ ಬಾಘ ಮತ್ತು ಕುಕ್ಷಿ ಪ್ರದೇಶದಲ್ಲಿರುವ ನರ್ಮದಾ ನದೀ ಕಣಿವೆಯಲ್ಲಿ; ಸೃಷ್ಟಿಯ ಬೃಹತ್‌ ಜೀವಿಗಳೆಂದು ಕರೆಸಿಕೊಂಡಿರುವ ಡೈನೋಸಾರ್‌ ಮತ್ತು ಟೈಟನೊಸಾರ್‌ಗಳ 256 ಮೊಟ್ಟೆಗಳು ಪತ್ತೆಯಾಗಿವೆ. ಹಾಗೆಯೇ ಡೈನೊಸಾರ್‌ಗಳ ಬೃಹತ್‌ ಗೂಡುಗಳೂ ಕಂಡುಬಂದಿವೆ.

Advertisement

2017ರಿಂದ 2020ರವರೆಗೆ ದೆಹಲಿ ವಿವಿ ಮತ್ತು ಐಐಎಸ್‌ಇಆರ್‌ನ ಕೋಲ್ಕತ-ಭೋಪಾಲ್‌ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ಕುತೂಹಲಕಾರಿ ಸಂಗತಿಗಳು ಪತ್ತೆಯಾಗಿವೆ. ಈ ಅಂಶ “ಪಿಎಲ್‌ಒಎಸ್‌’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಹರ್ಷ ಧಿಮಾನ್‌, ವಿಶಾಲ್‌ ವರ್ಮ, ಗುಂಟುಪಳ್ಳಿ ಪ್ರಸಾದ್‌ ಈ ಶೋಧದಲ್ಲಿ ಪಾಲ್ಗೊಂಡಿದ್ದಾರೆ.ಟೆಥಿಸ್‌ ಸಮುದ್ರ ಮತ್ತು ನರ್ಮದಾ ನದಿಗಳು ಸಂಗಮಿಸುವ ಪ್ರದೇಶದಲ್ಲಿ ಡೈನೋಸಾರ್‌ಗಳ ಮೊಟ್ಟೆಗಳು ಕಂಡುಬಂದಿವೆ. ಒಂದು ಕಾಲದಲ್ಲಿ ಪೂರ್ವ ಆಫ್ರಿಕಾದ ದ್ವೀಪಗಳ ರಾಷ್ಟ್ರ ಸೀಶೆಲ್ಸ್‌ ಭಾರತಕ್ಕೆ ಅಂಟಿಕೊಂಡಿತ್ತು. ಕಾಲಕ್ರಮೇಣ ಅದು ದೂರಸರಿಯಿತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next