Advertisement

ಸಂಶೋಧನೆಯೇ ಮೂಲಮಂತ್ರ

07:29 PM Oct 13, 2019 | Sriram |

ಸ್ಮಾರ್ಟ್‌ಫೋನ್‌ ತಯಾರಕ ಸಂಸ್ಥೆ ಶಿಯೋಮಿ ಫೋನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಸ್ಮಾರ್ಟ್‌ಫೋನ್‌ ಸಂಸ್ಥೆ ಎನ್ನುವುದಕ್ಕಿಂತ “ತಂತ್ರಜ್ಞಾನ’ ಸಂಸ್ಥೆ ಎನ್ನುವುದು ಹೆಚ್ಚು ಸೂಕ್ತ. ಏಕೆಂದರೆ, ಈ ಹೊತ್ತಿನಲ್ಲಿ ಕ್ಸಿಯೋಮಿ ಅದೆಷ್ಟೋ ದಿನಬಳಕೆಯ ಉಪಕರಣಗಳ ಸಂಶೋಧನೆಯಲ್ಲಿ ನಿರತವಾಗಿದೆ.

Advertisement

ಏರ್‌ ಪ್ಯೂರಿಫೈಯರ್‌, ಟಿ.ವಿ, ಸ್ಮಾರ್ಟ್‌ ಸೆಕ್ಯುರಿಟಿ ಕ್ಯಾಮೆರಾಗಳ ನಂತರ ಇದೀಗ ಮತ್ತೂಂದು ಕ್ಷೇತ್ರಕ್ಕೂ ಕಾಲಿಟ್ಟಿದೆ. ಅದುವೇ ವಾಟರ್‌ ಪ್ಯೂರಿಫೈಯರ್‌. ಈ “Mಜಿ ವಾಟರ್‌ ಪ್ಯೂರಿಫೈಯರ್‌’ ಕೂಡಾ ಸ್ಮಾರ್ಟ್‌ ತಂತ್ರಜ್ಞಾನವನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ ಆ್ಯಪ್‌ನ ಸಹಾಯದಿಂದ, ಬಳಕೆದಾರರು ಉಪಕರಣಕ್ಕೆ ಸರಬರಾಜು ಮಾಡುವ ನೀರಿನ ಗುಣಮಟ್ಟವನ್ನು ತಿಳಿದುಕೊಳ್ಳಬಹುದು. ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ರೂಪಿಸಲಾಗಿರುವ ಈ ವಾಟರ್‌ ಪ್ಯೂರಿಫೈಯರ್‌ನಲ್ಲಿ ಆರ್‌ಓ ಮತ್ತು ಅಲ್ಟ್ರಾ ವಯಲೆಟ್‌ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.

ವಾಟರ್‌ಪ್ಯೂರಿಫೈಯರ್‌ಗಳದು ಒನ್‌ ಟೈಮ್‌ ಇನ್‌ವೆಸ್ಟ್‌ಮೆಂಟ್‌ ಅಲ್ಲವೇ ಅಲ್ಲ. ಕಾಲ ಕಾಲಕ್ಕೆ ಫಿಲ್ಟರ್‌ಗಳನ್ನು ಬದಲಾಯಿಸುತ್ತಿರಬೇಕು. ಹೀಗಾಗಿ ವಾಹನಗಳ ಹಾಗೆಯೇ ಸರ್ವೀಸ್‌ ಖರ್ಚು ಬೀಳುತ್ತಿರುತ್ತದೆ. ಅದನ್ನು ಗಮನದಲ್ಲಿರಿಸಿಕೊಂಡು ಬಳಕೆದಾರರೇ ಫಿಲ್ಟರ್‌ಗಳನ್ನು ಬದಲಾಯಿಸುವ ಹಾಗೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆ್ಯಪ್‌ ಮುಖಾಂತರ ಯಾವಾಗ ಫಿಲ್ಟರ್‌ಗಳನ್ನು ಬದಲಾಯಿಸಬೇಕೆಂಬುದನ್ನು ಬಳಕೆದಾರ ತಿಳಿದುಕೊಳ್ಳಬಹುದು. ತಂತ್ರಜ್ಞರ ನೆರವಿಲ್ಲದೆ ಬಳಕೆದಾರರು ತಾವೇ ಸ್ವತಃ ಸರ್ವೀಸ್‌ ಮಾಡಿಕೊಳ್ಳಬಹುದು ಎನ್ನುವುದು ಈ ವ್ಯವಸ್ಥೆಯ ಹೆಗ್ಗಳಿಕೆ. ಎಲ್‌ಇಡಿ ಬಲ್ಬ್ಗಳನ್ನೂ ಸಂಸ್ಥೆ ಹೊಂದಿದೆ. ಯಾವುದೇ ಕ್ಷೇತ್ರವಾದರೂ ಬದಲಾವಣೆ ಮತ್ತು ಸುಧಾರಣೆಗೆ ಜಾಗವಿದ್ದಲ್ಲಿ ಸಂಸ್ಥೆ ಆ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವುದನ್ನು ಶಿಯೋಮಿ ಆಗಾಗ್ಗೆ ಸಾಬೀತುಪಡಿಸುತ್ತಲೇ ಇದೆ. ಯಾವುದೇ ಸಂಸ್ಥೆ ಸಂಶೋಧನೆಯಿಂದ ಮಾತ್ರ ತನ್ನ ಮಾರುಕಟ್ಟೆಯನ್ನು ದೀರ್ಘ‌ಕಾಲ ಉಳಿಸಿಕೊಳ್ಳಬಲ್ಲದು ಎನ್ನುವ ಸತ್ಯವನ್ನು ಶಿಯೋಮಿ ಅರಿತಂತಿದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧೆ ಬೆಳೆದು ಗ್ರಾಹಕರಿಗೇ ಹೆಚ್ಚಿನ ಪ್ರಯೋಜನ ಸಿಗುವುದು ಎಂಬುದರಲ್ಲಿ ಎರಡು ಮಾತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next