Advertisement

Research: ಮನುಷ್ಯ ಕನಸಲ್ಲೂ ಸಂವಹನ ನಡೆಸಬಲ್ಲ: ವಿಜ್ಞಾನಿಗಳು

01:18 AM Oct 15, 2024 | Team Udayavani |

ಕ್ಯಾಲಿಫೋರ್ನಿಯಾ: ಗಾಢ ನಿದ್ರೆಯಲ್ಲಿರುವ ಇಬ್ಬರು ವ್ಯಕ್ತಿಗಳು ಕನಸಿನಲ್ಲಿ ಪರಸ್ಪರ ಸಂವಹನ ನಡೆಸುತ್ತಾರೆ ಎಂದು ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಹೇಳಿದ್ದಾರೆ. ಇದು ವಿಶ್ವದಲ್ಲೇ ಮೊದಲ ಬಾರಿ ನಡೆದ ಸಂವಹನ ಎಂದು ಅವರು ಹೇಳಿಕೊಂಡಿದ್ದಾರೆ.

Advertisement

ರೆಮ್‌ಸ್ಪೇಸ್‌ ಎಂಬ ಸಂಸ್ಥೆ ಈ ಸಂಶೋಧನೆ ನಡೆಸಿದೆ. ಇದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಳಕೆ ಮಾಡಿಕೊಂಡಿದ್ದು, ಒರ್ವ ವ್ಯಕ್ತಿ ಗಾಢ ನಿದ್ರೆಯಲ್ಲಿದ್ದಾಗ “ಜುಲಕ್‌’ ಎಂಬ ಪದ ಉಚ್ಚರಿಸಿದ್ದಾನೆ. ಈ ಸಮಯದಲ್ಲಿ ಆತ ಲುಸಿಡ್‌ ಡ್ರೀಮ್‌ (ಗಾಢ ನಿದ್ರೆಯಲ್ಲಿದ್ದಾಗ ಕಾಣುವ ಕನಸು)ನಲ್ಲಿದ್ದ ಎಂಬುದನ್ನು ವೈಜ್ಞಾನಿಕ ಸಾಧನಗಳ ಮೂಲಕ ಖಚಿತ ಪಡಿಸಿಕೊಳ್ಳಲಾಗಿದೆ.

ಇದಾದ 8 ನಿಮಿಷ ಗಳ ಬಳಿಕ ಮತ್ತೂಬ್ಬ ವ್ಯಕ್ತಿಯನ್ನು ಇದೇ ಲುಸಿಡ್‌ ಡ್ರೀಮ್‌ ಸ್ಥಿತಿಗೆ ತಲುಪಿಸಿ, ಇಯರ್‌ಫೋನ್‌ ಮೂಲಕ “ಜುಲಕ್‌’ ಎಂಬ ಶಬ್ದದ ಎಲೆಕ್ಟ್ರಾನಿಕ್‌ ತರಂಗಗಳನ್ನು ಕೇಳಿಸಲಾಗಿದೆ. ತತ್‌ಕ್ಷಣವೇ ಆ ವ್ಯಕ್ತಿ ಜುಲಕ್‌ ಎಂದು ಉಚ್ಚರಿಸಿದ್ದಾರೆ. ರೆಮ್‌ಸ್ಪೇಸ್‌ ಈ ಸಂಶೋಧನೆ ಬಗ್ಗೆ ಹೇಳಿದ್ದರೂ ಇದಕ್ಕೆ ಬಳಕೆ ಮಾಡಿರುವ ವೈಜ್ಞಾನಿಕ ವಿಧಾನವನ್ನು ಅವರು ವಿವರಿಸಿಲ್ಲ. ಒಂದು ವೇಳೆ ಇದು ಸತ್ಯವಾ ದರೆ, ಮಾನಸಿಕ ರೋಗಗಳ ಚಿಕಿತ್ಸೆ ಮತ್ತು ಕೌಶಲಾಭಿವೃದ್ಧಿಗೆ ಇದು ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next