Advertisement
ಉಡುಪಿ ಕುಕ್ಕಿಕಟ್ಟೆ ನಿವಾಸಿ ಬಾಲಕೃಷ್ಣ ಭಟ್ ರಕ್ಷಿಸಲ್ಪಟ್ಟ ವ್ಯಕ್ತಿಯಾಗಿದ್ದು, ಸುಮಾರು 5 ಗಂಟೆಗಳ ಕಾಲ ಅಪಾಯದ ಸುಳಿಗೆ ಸಿಲುಕಿದ್ದ ಅವರನ್ನು ರಕ್ಷಿಸಿ, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
Advertisement
ಶುಕ್ರವಾರ ಮುಂಜಾನೆ 4.30 ರ ವೇಳೆಗೆ ಮಣಿಪಾಲದಿಂದ ಕೆಲಸ ಮುಗಿಸಿ ಬರುತ್ತಿದ್ದ ಯುವಕನೋರ್ವ ರಸ್ತೆ ಬದಿಯಲ್ಲಿ ಬಿದ್ದಿದ್ದ ಸ್ಕೂಟಿಯನ್ನು ನೋಡಿ, ಸಂಶಯದ ಮೇರೆಗೆ ಸ್ಥಳಕ್ಕೆ ಹೋಗಿ ಪರಶೀಲಿಸಿದಾಗ ಹೊಳೆಯಲ್ಲಿ ವ್ಯಕ್ತಿಯೋರ್ವರು ಬೊಬ್ಬೆ ಹೊಡೆಯುವ ಸದ್ದು ಕೇಳಿದ್ದರು.
ತತ್ ಕ್ಷಣ ಅದನ್ನು ಗಮನಿಸಿದ ಯುವಕರು ಬಳಿಕ ಸತ್ಯದ ತುಳುವೆರ್ ತಂಡದ ಮುಖ್ಯಸ್ಥ ಪ್ರವೀಣ್ ಕುರ್ಕಾಲು ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅವರು, ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನಡೆಸಿ, ಅವರ ಮೂಲಕ ಅಪಾಯಕ್ಕೆ ಸಿಲುಕಿದ್ದ ಬಾಲಕೃಷ್ಣ ಭಟ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಳಿ – ಮಳೆ ಸಹಿತವಾದ ಗಂಭೀರ ಪ್ರತಿಕೂಲದ ವಾತಾವರಣದ ನಡುವೆಯೂ ಮುಳುಗು ತಜ್ಞ ಈಶ್ವರ್ ಮಲ್ಪೆ, ಪ್ರವೀಣ್ ಕುರ್ಕಾಲ್ ನೇತೃತ್ವದಲ್ಲಿ ಸತ್ಯದ ತುಳುವೆರ್, ಹಾಗು ಮೇನ್ನಲ ಯುವಕರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಬೇಕಿದ್ದ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಶ್ಲಾಘನೆಗೆ ಕಾರಣರಾಗಿದ್ದಾರೆ.