Advertisement

Rescue: ದಿಢೀರನೇ ಬಿಎಂಟಿಸಿ ಬಸ್‌ ಅಡಿಗೆ ನುಗ್ಗಿದ ಚಿರತೆ ರಕ್ಷಣೆ

01:19 PM Apr 04, 2024 | Team Udayavani |

ಬೆಂಗಳೂರು: ಕನಕಪುರ ರಸ್ತೆಯ ತುರಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುವ ಕೆಂಗೇರಿ-ಬನಶಂಕರಿ ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗೆ ಏಕಾಏಕಿ ಎದುರು ಬಂದ 8 ತಿಂಗಳ ಹೆಣ್ಣು ಚಿರತೆ ಮರಿಯನ್ನು ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳ ತಂಡ ರಕ್ಷಿಸಿದ್ದಾರೆ.

Advertisement

ಬೆಳಗ್ಗೆ 11 ಗಂಟೆ ಸುಮಾರಿಗೆ ತುರಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆಯನ್ನು ದಾಟುವ ಅವಸರದಲ್ಲಿ ಚಿರತೆ ಮರಿ ಏಕಾಏಕಿ ವಾಹನವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಆಗ ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್‌ ಚಾಲಕ ಹಾಗೂ ಇತರೆ ವಾಹನಗಳ ಚಾಲಕರು ಗಾಬರಿಗೊಂಡು ವಾಹನ ನಿಲ್ಲಿಸಿದ್ದಾರೆ. ಒಮ್ಮೆಲೆ ಸಾರ್ವಜನಿಕರು ಜಮಾಯಿಸಿದ್ದರಿಂದ ಗಾಬರಿಗೊಂಡ ಚಿರತೆ ಮರಿ ಬಿಎಂಟಿಸಿ ಬಸ್‌ ಅಡಿಯಲ್ಲಿ ಅಡಗಿಕೊಂಡಿತ್ತು.

ಈ ಬಗ್ಗೆ ಮಾಹಿತಿ ಪಡೆದ ಮುಖ್ಯ ವನ್ಯಜೀವಿ ಪಶುವೈದ್ಯ ಕರ್ನಲ್‌ ಡಾ. ನವಾಜ್‌ ಷರೀಫ್ ನೇತೃತ್ವದ ಪಿಎಫ್ಎ ಕೇಂದ್ರದ ಸದಸ್ಯರು ಸ್ಥಳಕ್ಕೆ ಧಾವಿಸಿದರು. ಯಾವುದೇ ಅರವಳಿಕೆ ಮದ್ದು ನೀಡದೇ ಚಿರತೆ ಮರಿಯನ್ನು ಸೆರೆ ಹಿಡಿದರು. ಬಳಿಕ ಸಮೀಪದಲ್ಲೇ ಇದ್ದ ವನ್ಯಜೀವಿ ಆಸ್ಪತ್ರೆಗೆ ಕೆರದೊಯ್ದು ಚಿಕಿತ್ಸೆ ನೀಡಲಾಯಿತು. ಪಶುವೈದ್ಯ ಡಾ.ಮಾಧವ್‌ ಎಚ್‌.ವಿ., ರಕ್ಷಣಾ ಸಂಯೋಜಕ ಸಲ್ಮಾನ್‌ ಖಾನ್‌, ರಕ್ಷಕ ಭರತ್‌, ಕ್ಯುರೇಟರ್‌ ರಾಹುಲ್‌, ಪುನರ್ವಸತಿ ಕಲ್ಪಿಸುವ ವಸಂತ ರಕ್ಷಣಾ ತಂಡದಲ್ಲಿದ್ದರು.

ಚಿರತೆ ಮರಿ 9.5 ಕೆ.ಜಿ. ತೂಕವಿತ್ತು. ತೂಕದ ಆಧಾರದಲ್ಲಿ ಮರಿಗೆ 7 ರಿಂದ 8 ತಿಂಗಳು ಎಂದು ವಯಸ್ಸನ್ನು ಅಂದಾಜಿಸಲಾಗಿದೆ. ನಂತರ ಎಸಿಎಫ್ ಸುರೇಶ್‌ ಮತ್ತು ಅಧಿಕಾರಿಗಳು ಪಿಎಫ್ಎ ಕೇಂದ್ರಕ್ಕೆ ಭೇಟಿ ನೀಡಿದರು. ■ ಉದಯವಾಣಿ ಸಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next