Advertisement

ಸಸಿ ನೆಡುವ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವುದು ಅಗತ್ಯ

06:00 AM Sep 24, 2018 | |

ಸಿರಿಗೆರೆ: ರಾಜ್ಯಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕಡಿಮೆಯಾದಾಗ ಕೃಪಾಂಕ ನೀಡಿ ಫಲಿತಾಂಶವನ್ನು
ಸುಧಾರಣೆ ಮಾಡಲಾಗುತ್ತದೆ. ಅದೇ ರೀತಿ ಪ್ರೌಢಶಾಲಾ ಹಂತದ ಮೂರು ವರ್ಷಗಳಲ್ಲಿ ಕನಿಷ್ಠ ಹತ್ತು ಸಸಿಗಳನ್ನು
ನೆಟ್ಟು ಸಲಹುವ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ಪ್ರೋತ್ಸಾಹಿಸಲು ಸರಕಾರ ಮುಂದಾಗಬೇಕು ಎಂದು
ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದ್ದಾರೆ.

Advertisement

ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ
ಶ್ರೀಗಳು, ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ ಕೋಟ್ಯಂತರ ರೂ. ಅನುದಾನ ನೀಡುತ್ತದೆ. ಇದರ ಬದಲಿಗೆ ಶಾಲಾ ಮಕ್ಕಳಿಗೆ ಕೃಪಾಂಕ ನೀಡುವ ಪದ್ಧತಿಯನ್ನು ಜಾರಿಗೊಳಿಸಿದರೆ ಯಾವುದೇ ಖರ್ಚಿಲ್ಲದೆ ರಾಜ್ಯದಲ್ಲಿ ಬೃಹತ್‌ ಪ್ರಮಾಣದಲ್ಲಿ ಅರಣ್ಯೀಕರಣ ಮಾಡಬಹುದು. ಆಗ ನಾಡು ಸಸ್ಯ ಶ್ಯಾಮಲೆಯಾಗಿ ಕಂಗೊಳಿಸುತ್ತದೆ ಎಂದರು.

ಕೃಪಾಂಕ ದೊರೆಯುವ ಆಸೆಯಿಂದ ಮಕ್ಕಳು ಸಸಿಗಳನ್ನು ಪೋಷಿಸುತ್ತಾರೆ. ಆಗ ಪರಿಸರ ಸಂರಕ್ಷಣೆ ಸುಲಭವಾಗಿ
ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next