ಸೋಮವಾರ ನಡೆದ ಜಿಲ್ಲಾ ಹಾಗೂ ತಾಲೂಕು ಚುನಾವಣಾ ಧಿಕಾರಿ, ಸಹಾಯಕ ಚುನಾವಣಾ ಧಿಕಾರಿಗಳ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿ ಕಾರಿಗಳು ಮಾನಸಿಕ ಮತ್ತು ಭೌತಿಕವಾಗಿ ಸಿದ್ಧರಾಗಬೇಕು. ಯಾವುದೇ ವಿಷಯದಲ್ಲಿ ನಿರ್ಲಕ್ಷ ವಹಿಸುವುದು ಸರಿಯಲ್ಲ. ಚುನಾವಣೆ ಬಹಳ ಕಠಿಣವಾಗಿದ್ದು, ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಪ್ರತಿ ಬೂತ್‌ನಲ್ಲೂ ವೆಬ್ ಕ್ಯಾಸ್ಟಿಂಗ್ ಮಾಡಲಾಗುತ್ತದೆ. ದೂರಸಂಪರ್ಕ ಇಲಾಖೆ ಅ ಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಯಾವುದೇ ಬೂತ್‌ನಲ್ಲಿ ವೆಬ್ ಕ್ಯಾಸ್ಟಿಂಗ್ ಇಲ್ಲ ಎನ್ನುವ ದೂರುಗಳು ಬರಕೂಡದು ಎಂದು ತಾಕೀತು ಮಾಡಿದರು.
Advertisement
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತಿಸಿರುವ ಮತಗಟ್ಟೆಗಳಲ್ಲಿ ವಿಡಿಯೋಗ್ರಫಿ, ವೆಬ್ ಕ್ಯಾಸ್ಟಿಂಗ್ ಮಾಡಬೇಕು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮಮತಗಟ್ಟೆಗಳಾಗಲು ಕಾರಣವನ್ನು ಪತ್ತೆ ಹಚ್ಚಿ ಸೂಕ್ತ ವರದಿ ನೀಡಬೇಕು. ಅಲ್ಲದೆ ಅತಿ ಕಡಿಮೆ ಮತದಾನ ಮತ್ತು ಅತಿ ಹೆಚ್ಚಿನ ಮತದಾನ ಆಗಿರುವ ಕಡೆಗಳಲ್ಲಿ ತೀವ್ರ ನಿಗಾ ವಹಿಸಿ ಕಾರಣಗಳೇನು ಎಂದು ಪತ್ತೆ ಮಾಡಿ ಕಡಿಮೆ ಮತದಾನವಾಗಿದ್ದ ಕಡೆಗಳಲ್ಲಿ ಅರಿವು ಮೂಡಿಸುವ ಕಾರ್ಯ ಈಗಿನಿಂದಲೇ ಆಗಬೇಕು. ಅತಿ ಹೆಚ್ಚು ಮತದಾನವಾಗಿರುವ ಕಡೆಗಳಲ್ಲಿ ಯಾರಿಗೆ ಹೆಚ್ಚು ಮತದಾನವಾಗಿದೆ, ಏಕೆ ಅಷ್ಟು ಮತದಾನವಾಗಿದೆ,ಇದಕ್ಕೆ ಕಾರಣವೇನು ಇತ್ಯಾದಿ ಮಾಹಿತಿಗಳನ್ನು ಒಂದು ವಾರದೊಳಗೆ ನೀಡಬೇಕು. ಅಂತಹ ಕೇಂದ್ರಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಅತಿ
ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವ ಜೊತೆಗೆ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕೆಂದರು.
ಜಿಲ್ಲಾಧಿಕಾರಿ, ಸಭೆ ಮುಗಿದ ಮೇಲೆ ಮಾಹಿತಿ ನೀಡುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ವಿಧಾನಸಭಾ ಚುನಾವಣೆಗೆ ಮತದಾರರ ಪಟ್ಟಿ
ಪರಿಷ್ಕರಣೆ ನಡೆದಿದ್ದು, ಹಕ್ಕು ಆಕ್ಷೇಪಣೆಗಳನ್ನು ಫೆ. 12ರೊಳಗಾಗಿ ವಿಲೇ ಮಾಡಬೇಕಾಗಿದೆ. ಅಂತಿಮ ಪಟ್ಟಿಯನ್ನು ಫೆ. 28ರಂದು ಪ್ರಕಟಿಸಲಾಗುತ್ತದೆ. ಎಲ್ಲಾ ತಹಶೀಲ್ದಾರರು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ಪಟ್ಟಿಯಿಂದ ಕೈಬಿಡಲು ನಮೂನೆ 6, 7, 8, 8ಎ ಅಡಿ ಸಲ್ಲಿಸಿ ಅರ್ಜಿಗಳ ವಿಲೇಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಚುನಾವಣೆಗೆ ಸಂಬಂಧಿ ಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 08194-222176 ಸಹಾಯವಾಣಿ ಸ್ಥಾಪಿಸಲಾಗಿದ್ದು, ದೂರುಗಳಿದ್ದಲ್ಲಿ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದರು. ಸಭೆಯಲ್ಲಿ ಜಿಪಂ ಸಿಇಒ ಪಿ.ಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಶ್ರೀನಾಥ್ ಜೋಶಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ರಾಮ ಲಕ್ಷ್ಮಣ ಅರೆಸಿದ್ದಿ, ಅಪರ ಜಿಲ್ಲಾ ಧಿಕಾರಿ ಸಂಗಪ್ಪ, ಉಪವಿಭಾಗಾ ಕಾರಿ ವಿಜಯಕುಮಾರ್, ತಹಶೀಲ್ದಾರ್ ಮಲ್ಲಿಕಾರ್ಜುನ, ಕಾಂತರಾಜ್, ವೆಂಕಟೇಶಪ್ಪ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು. ಬ್ಯಾನರ್-ಬಂಟಿಂಗ್ಸ್ ಮೇಲೆ ಹದ್ದಿನ ಕಣ್ಣಿಡಿ
ಸರ್ಕಾರದ ವಿವಿಧ ಯೋಜನೆಗಳ ಪ್ರಚಾರಕ್ಕಾಗಿ ಬರೆಸಲಾಗಿರುವ ಗೋಡೆಬರಹಗಳು, ಖಾಸಗಿ ವ್ಯಕ್ತಿ ಮತ್ತು ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಹಾಕಲಾಗಿರುವ ಗೋಡೆಬರಹ, ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಯಾವ ಸ್ಥಳದಲ್ಲಿವೆ ಎನ್ನುವ ಸಂಪೂರ್ಣ ಮಾಹಿತಿ ಇರಬೇಕು. ನೀತಿಸಂಹಿತೆ ದಿನ ಘೋಷಣೆ ಆಗುತ್ತಿದ್ದಂತೆ ಆ ಎಲ್ಲ ಬರಹ, ಬ್ಯಾನರ್, ಬಂಟಿಂಗ್ಸ್ ತೆರವುಗೊಳಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಲೆಮಾರಿಗಳು, ಅರೆ ಅಲೆಮಾರಿಗಳು, ವಿಕಲಚೇತನರು ಯಾವುದೇ ಕಾರಣಕ್ಕೂ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಅಲೆಮಾರಿಗಳ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿ ಅಂಕಿ ಅಂಶಗಳ ಸಂಗ್ರಹ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.