ಯಾದಗಿರಿ: ನಗರದಲ್ಲಿ ಪ್ರತ್ಯೇಕ ಲಘು ವಾಹನ ನಿಲುಗಡೆಗೆ ಸ್ಥಳ ನಿಗದಿ ಮತ್ತು ಪ್ರತ್ಯೇಕ ಮೀನು ಮಾರಾಟ ಮಳಿಗೆ ನಿರ್ಮಾಣಕ್ಕೆ ಆಗ್ರಹಿಸಿ ಜಿಲ್ಲಾ ಟೋಕರಿ ಕೋಲಿ ಸಮಾಜದಿಂದ ಪೌರಾಯುಕ್ತ ಸಂಗಮೇಶ ಉಪಾಸೆ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕೇಂದ್ರ ಆಗಿರುವ ಯಾದಗಿರಿ ನಗರದಲ್ಲಿ ಪ್ರತ್ಯೇಕ ಲಘು ವಾಹನ ನಿಲುಗಡೆಗೆ ಸ್ಥಳ ನಿಗದಿ ಮತ್ತು ಪ್ರತ್ಯೇಕ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ 2012ರಿಂದಲೂ ಜಿಲ್ಲಾ ಟೋಕರಿ ಕೋಲಿ ಸಂಘದ ವತಿಯಿಂದ ಮನವಿ ಮಾಡಿ ಪ್ರತಿಭಟನೆ ಮಾಡುತ್ತಾ ಬಂದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ಈ ಬೇಡಿಕೆಗಳು ನಗರಸಭೆ ವ್ಯಾಪ್ತಿಗೆ ಬರುವುದರಿಂದ ಪೌರಾಯುಕ್ತರಾದ ತಾವುಗಳು ಒಂದು ವಾರದಲ್ಲಿ ಸ್ಥಳ ಪರಿಶೀಲಿಸಿ ಬೇಡಿಕೆ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಎರಡು ಬೇಡಿಕೆಗಳನ್ನು ಪೂರೈಸಲು ಆಯಾ ಸ್ಥಳದಲ್ಲಿ ಸ್ಥಳ ನಿಗದಿಗೊಳಿಸಿ ಅದಕ್ಕೆ ಚೆಕ್ ಬಂದಿ ಮಾಡಿ ಮೂಲಭೂತ ಸೌಕರ್ಯ ಒದಗಿಸಿ ಹೈಟೆಕ್ ಮೀನು ಮಾರಾಟ ಮಳಿಗೆ ಮಾಡಲು ಒತ್ತು ಕೊಡಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಸಾರ್ವನಿಕರರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಅತ್ಯವಶ್ಯಕವಾಗಿದ್ದು, ಇದನ್ನು ಅದ್ಯತೆ ಮೇರೆಗೆ ಕೈಗೆತ್ತಿಕೊಂಡು ಆಯಾ ಸ್ಥಳದಲ್ಲಿ ನಗರಸಭೆಯಿಂದ ನಾಮಫಲಕ ಅಳವಡಿಸಿ ಶಿಸ್ತುಬದ್ಧ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಮೀನು ಮಾರಾಟ ಮತ್ತು ವಾಹನ ನಿಲುಗಡೆ ಸ್ಥಳವನ್ನು ನಿಗದಿ ಮಾಡದಿದ್ದರೆ ಪೌರಾಯುಕ್ತರ ಕಚೇರಿ ಎದುರಿಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಮಲ್ಲನಗೌಡ, ಶಂಕ್ರಣ್ಣ, ಮಹೇಶ, ಬಸಣ್ಣ, ರಾಜಶೇಖರ, ಮಲ್ಲಿಕಾರ್ಜುನ, ರವಿ , ವಿಶ್ವ, ವಿಜಯ,
ಬಸವರಾಜ, ಶರಣು, ಬಸ್ಸು, ರಮೇಶ, ದಾವುದ್, ಸಾಯಿಬಣ್ಣ, ಶೇಖರ, ಮಹ್ಮದ್, ಚಿಕ್ಕಣ್ಣ, ಆಸಿಫ್, ದೇವರಾಜ, ರಡ್ಡಿ,
ಗುಂಡು, ಮಲ್ಲು, ಆನಂದ, ಶಿವಯ್ಯಸ್ವಾಮಿ ಇದ್ದರು.