Advertisement
ಅಲಸ್ಟಾಂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಗಾಯಕವಾಡ ಮಾತನಾಡಿ, ನಿವೃತ್ತ ನೌಕರರು ವಾಸಿಸುವ ಜಿಇ ಕಾಲೋನಿಯಲ್ಲಿ ಸುಮಾರು ಮೂರು ವರ್ಷದಿಂದ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇದರಿಂದ ಇಲ್ಲಿನ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ತಿಳಿಸಿದರೂ ಸಂಬಂಧಿಸಿದ ಜಿಇ ಕಾಲೋನಿಯ ಅಧಿಕಾರಿ ವರ್ಗದವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ ಕಾಲೋನಿಯಲ್ಲಿ ನಗರೋತ್ಥಾನದಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಒಳಚರಂಡಿ ವ್ಯವಸ್ಥೆ ಮಾಡಿದ್ದಾರೆ. ಅದನ್ನು ಇನ್ನೂ ಸಂಪರ್ಕಿಸುವ ಕೆಲಸ ಮಾಡದಿರುವುದರಿಂದ ಹಳೆ ಒಳ ಚರಂಡಿಗಳು ಹಾಳಾಗಿ ನೀರು ಹೊರಬಂದು ಗಬ್ಬು ವಾಸನೆ ಹರಡುತ್ತಿದೆ. ಎಲ್ಲಿ ನೋಡಿದರಲ್ಲಿ ಕಸ, ಹುಲ್ಲು, ಗಿಡಕಂಟಿ ಬೆಳೆದು ವಾಸಿಸಲು ಅಯೋಗ್ಯ ಸ್ಥಾನವಾಗಿದೆ. ಇದನ್ನು ಸ್ವಚ್ಛತೆ ಮಾಡಲು ಅನೇಕ ಬಾರಿ ಅಧಿಸೂಚಿತ ಕ್ಷೇತ್ರ ಸಮಿತಿಯ ಅಧಿ ಕಾರಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಕೂಡಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಗರೋತ್ಥಾನದಲ್ಲಿ ನಿರ್ಮಿಸಿದ ಒಳಚರಂಡಿ ವ್ಯವಸ್ಥೆಯನ್ನು ಹಳೆ ಚರಂಡಿಗೆ ಸಂಪರ್ಕಿಸಬೇಕು. ಕಾಲೋನಿಯ ಸ್ವತ್ಛತೆ ಕಾಪಾಡಬೇಕು. ಇಲ್ಲದಿದ್ದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
ಶುದ್ಧ ನೀರು ಪೂರೈಸಲು ಆಗ್ರಹಿಸಿ ಮನವಿ
12:16 PM Jul 27, 2020 | Suhan S |
Advertisement
Udayavani is now on Telegram. Click here to join our channel and stay updated with the latest news.