Advertisement

ರಬಕವಿ-ಬನಹಟ್ಟಿಗೆ ಕಚೇರಿ ಒದಗಿಸಲು ಆಗ್ರಹ

11:23 AM Feb 03, 2020 | Suhan S |

ಬನಹಟ್ಟಿ : ರಬಕವಿ-ಬನಹಟ್ಟಿ ತಾಲೂಕು ಕೇಂದ್ರ ಅಧಿಕೃತವಾಗಿ ಘೋಷಣೆಯಾಗಿ ಆರು ವರ್ಷ ಕಳೆದರೂ ತಹಶೀಲ್ದಾರ್‌ ಕಚೇರಿ ಹೊರತುಪಡಿಸಿ ತಾಲೂಕಿಗೆ ಸಂಬಂಧಿಸಿದ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ನಗರದ ವಿಶ್ರಾಂತಿ ಧಾಮದಲ್ಲಿ ತೇರದಾಳ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಶೀಘ್ರ ಉಪ ನೋಂದಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಪಂ ಸೇರಿದಂತೆ ವಿವಿಧ ಕಾರ್ಯಾಲಯ ಶೀಘ್ರ ಒದಗಿಸಬೇಕೆಂದು ರಬಕವಿ-ಬನಹಟ್ಟಿ ತಾಲೂಕು ಸಮನ್ವಯ ಸಮಿತಿ ಒತ್ತಾಯಿಸಿತು. ಸರ್ಕಾರದ ತೀವ್ರ ನಿರ್ಲಕ್ಷ್ಯ ದಿಂದ ತಾಲೂಕು ಕೇಂದ್ರ ಪ್ರಗತಿ ಹೊಂದುವಲ್ಲಿ ತೀವ್ರ ಹಿನ್ನಡೆಯುಂಟಾಗುತ್ತಿದೆ. ತಾಲೂಕಿನ ರೈತರು ಹಾಗೂ ನೇಕಾರರಿಗೆ ದೊರಕಬೇಕಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ದೂರದ ಜಮಖಂಡಿಗೆ ಅಲೆದಾಡಬೇಕಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್‌. ಅಶೋಕ ಶೀಘ್ರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಶಂಕರ ಸೊರಗಾಂವಿ, ನೀಲಕಂಠ ಮುತ್ತೂರ, ಬಸವರಾಜ ತೆಗ್ಗಿ, ಪ್ರೊ| ಬಸವರಾಜ ಕೊಣ್ಣೂರ, ರಾಮಣ್ಣ ಹುಲಕುಂದ, ದುಂಡಪ್ಪ ಮಾಚಕನೂರ, ಧರೆಪ್ಪ ಉಳ್ಳಾಗಡ್ಡಿ, ಗಣಪತರಾವ್‌ ಹಜಾರೆ, ಮಲ್ಲಿಕಾರ್ಜುನ ನಾಶಿ, ಮಹಾದೇವ ಧೂಪದಾಳ, ನೀಲಕಂಠ ದಾತಾರ, ಪರಪ್ಪ ಉರಭಿನವರ, ನಂದು ಗಾಯಕವಾಡ, ಎಂ. ಎಸ್‌. ಬದಾಮಿ, ಶೇಖರ ಕೊಟ್ರಶೆಟ್ಟಿ, ಈಶ್ವರ ನಾಗರಾಳ, ಪಂಚಾಕ್ಷರಿ ಹಿರೇಮಠ, ಬಾಬು ನಡುವಿನಮನಿ, ಮಹಾದೇವ ಕೋಟ್ಯಾಳ, ಬಸವರಾಜ ಮನ್ಷಿ, ಈಶ್ವರ ಕಾಡದೇವರ, ಜಯಪ್ರಕಾಶ ಸೊಲ್ಲಾಪುರ, ಗೋವಿಂದ ಡಾಗಾ, ವಿಶ್ವನಾಥ ಸವದಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next