Advertisement
ಜು. 24ರಂದು ಕುಂಟಾಡಿ ಬಿಲ್ಲವ ಸಭಾ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಗ್ರಾ.ಪಂ. ಉಪಾಧ್ಯಕ್ಷ ಲಕ್ಷ್ಮೀಕಾಂತ್ ಭಟ್ ಕಳೆದ ಗ್ರಾಮ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾವಿಸಿದ್ದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಮೆಸ್ಕಾಂ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡರು.
ಬೆನ್ನಿತಡ್ಕ ಬಳಿ ಸೋಲಾರ್ ದೀಪಗಳು ಕಳವಾಗಿದ್ದು ದಾರಿ ದೀಪ ಇಲ್ಲದಂತಾಗಿದೆ ಎಂದು ಸುರೇಶ್ ಭಟ್ ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ವತಿಯಿಂದ ದಾರಿದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ಕನ್ನಡಿ ಬಳಿ ವಿದ್ಯುತ್ ಕಂಬವು ಮುರಿಯುವ ಹಂತಕ್ಕೆ ಬಂದು ತಲುಪಿದೆ ಎಂದು ಸತೀಶ್ ಕಲ್ಯಾ ಹೇಳಿದಾಗ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಸುಧೀಂದ್ರ ಅವರು, ಒಂದು ವಾರದೊಳಗೆ ವಿದ್ಯುತ್ ಕಂಬ ದುರಸ್ತಿಗೊಳಿಸಲಾಗುವುದು ಎಂದರು.
Related Articles
Advertisement
ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಸ್ಥಳೀಯರಿಗೆ ಗೊಂದಲವಿದ್ದು ಈ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಗ್ರಾ.ಪಂ. ಸದಸ್ಯ ರವಿರಾಜ್ ಉಪಾಧ್ಯಾಯ ಕೇಳಿಕೊಂಡರು.ಬಂಡಸಾಲೆ – ಅರ್ಬಿ ಬಳಿ ಸಂಪರ್ಕ ರಸ್ತೆಯನ್ನು ಖಾಸಗಿಯವರು ಅತಿಕ್ರಮಣಗೊಳಿಸಿದ್ದಾರೆ. ಈ ಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಮನೆಗಳಿದ್ದು ಸರಿಯಾದ ರಸ್ತೆಯಿಲ್ಲದೇ ತೊಂದರೆಯಾಗಿದೆ ಎಂದು ಹರಿಜೀವನ್ ಸಭೆಯ ಗಮನಕ್ಕೆ ತಂದರು. ಶ್ಮಶಾನ ಸಮಸ್ಯೆ
ಕಲ್ಯಾ ಗ್ರಾಮಕ್ಕೆ ಶ್ಮಶಾನ ನಿರ್ಮಾಣವಾಗಬೇಕು. ಈ ಕುರಿತು ಸಾಕಷ್ಟು ಬಾರಿ ಮನವಿ ನೀಡಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥ ಹರೀಶ್ ಹೇಳಿದರು. ಉತ್ತರಿಸಿದ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಭಟ್ ಕಲ್ಯಾ ಗ್ರಾಮ ಪಂಚಾಯತ್‌ನ ಬಹುತೇಕ ಜಾಗ ಡೀಮ್ಡ್ ಪಾರಸ್ಟ್ ಗೆ ಒಳಪಡುತ್ತಿದೆ. ಶ್ಮಶಾನಕ್ಕಾಗಿ ಸ.ನಂ. 159, 233 ಕಾದಿರಿಸಿದ ಜಾಗವೂ ಡೀಮ್ಡ್ನಲ್ಲಿದೆ. ಹೀಗಾಗಿ ವಿಳಂಬವಾಗುತ್ತಿದೆ ಎಂದು ಉತ್ತರಿಸಿದರು. ತ್ಯಾಜ್ಯ ತಂದು ಸುರಿಯುತ್ತಾರೆ !
ಕಲ್ಯಾ ಬ್ರಹ್ಮಸ್ಥಾನ ಬಳಿ ತ್ಯಾಜ್ಯದ ರಾಶಿಯಿದೆ. ಸಾರ್ವಜನಿಕರು ಕಸ ತಂದು ಇಲ್ಲಿ ಸುರಿಯುತ್ತಿದ್ದಾರೆ. ಸೂಚನಾ ಫಲಕ ಅಳವಡಿಸಿದ್ದರೂ ತ್ಯಾಜ್ಯ ತಂದು ಎಸೆಯುತ್ತಿದ್ದಾರೆ. ಈ ಕುರಿತು ಪಂಚಾಯತ್ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಿ ಎಂದು ಚಂದ್ರಕಾಂತ್ ಭಟ್ ಆಗ್ರಹಿಸಿದರು. ನೋಡಲ್ ಅಧಿಕಾರಿಯಾಗಿ ಸಹಾಯಕ ಕೃಷಿ ಅಧಿಕಾರಿ ಮಧುರಾ ಎಚ್. ಕಾರ್ಯನಿರ್ವಹಿಸಿದರು. ತೋಟಗಾರಿಕಾ ಇಲಾಖೆಯ ನಿಂಗಪ್ಪ, ಮಹಿಳಾ ಸಾಂತ್ವಾನ ಕೇಂದ್ರದ ಸುನೀತಾ, ಕಂದಾಯ ಇಲಾಖೆಯ ರಘುಪತಿ, ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದ ಸುಧಾಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೌಭಾಗ್ಯಾ ತಮ್ಮ ತಮ್ಮ ಇಲಾಖೆಯ ಮಾಹಿತಿ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷ ಲಕ್ಷ್ಮೀಕಾಂತ್ ಭಟ್, ಸದಸ್ಯರಾದ ರವಿರಾಜ್ ಉಪಾಧ್ಯಾಯ, ಕೃಷ್ಣರಾಜ್ ರೈ, ಮಮತಾ, ಸುಜಾತಾ, ಲತಾ, ಸುರೇಂದ್ರ ಅಮೀನ್, ಪ್ರವೀರ್ ಪಾಂಡಿ, ಜ್ಯೋತಿ ಉಪಸ್ಥಿತರಿದ್ದರು. ಪಿಡಿಒ ಸುರೇಶ್ ಎಸ್.ಎಸ್. ಸ್ವಾಗತಿಸಿ, ಗುಮಾಸ್ತ ಬಾಲಕೃಷ್ಣ ವರದಿ ಮಂಡಿಸಿದರು. ಕಾರ್ಯದರ್ಶಿ ಪ್ರಸಾದ್ ಭಂಡಾರಿ ಸಭೆ ನಿರ್ವಹಿಸಿದರು. ಅರಣ್ಯಾಧಿಕಾರಿ ಗೈರು
ಡೀಮ್ಡ್ ಫಾರೆಸ್ಟ್ ನಲ್ಲಿರುವ ಕಲ್ಯಾ ಮಲಾಯಬೆಟ್ಟು ರಸ್ತೆ ದುರಸ್ತಿಗೊಳಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ರೀತಿಯ ಪರಿಹಾರ ಕಂಡಿಲ್ಲ. ಈ ಬಗ್ಗೆ ಉತ್ತರಿಸಬೇಕಾದ ಅರಣ್ಯ ಇಲಾಖಾಧಿಕಾರಿಯೂ ಗೈರಾಗಿದ್ದಾರೆ ಎಂದು ಸತೀಶ್ ಕಲ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಯೋಜನೆಗೆ 14 ಲಕ್ಷ ರೂ.
ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಓವರ್‌ಹೆಡ್ ನಿರ್ಮಾಣವಾಗಲಿದೆ. ಜಿಲ್ಲಾ ಪಂಚಾಯತ್‌ನಿಂದ ಅನುದಾನ ಬಿಡುಗಡೆಯಾಗಲಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷರು ತಿಳಿಸಿದರು.