Advertisement

ನಿರಪರಾಧಿಗಳಿಗೆ ಆರ್ಥಿಕ ಪರಿಹಾರ: ಮಾರ್ಗಸೂಚಿಗಾಗಿ ಸುಪ್ರೀಂಗೆ ಮನವಿ

12:22 AM Mar 12, 2021 | Team Udayavani |

ಹೊಸದಿಲ್ಲಿ: ನಿರಪರಾಧಿಯಾಗಿದ್ದರೂ ಅದು ಸಾಬೀತಾಗುವವರೆಗೆ ವರ್ಷಗಟ್ಟಲೆ ಜೈಲು ವಾಸ ಅನುಭವಿಸುವ ವ್ಯಕ್ತಿಗಳಿಗೆ ಪ್ರಕರಣದಿಂದ ಅವರು ಖುಲಾಸೆಗೊಂಡ ಅನಂತರ ನಿರ್ದಿಷ್ಟ ಆರ್ಥಿಕ ಪರಿಹಾರ ನೀಡುವ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಸಾರ್ವಜನಿಕ ಹಿತಾಸಕ್ತಿಯೊಂದು ದಾಖಲಾಗಿದೆ.

Advertisement

ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿ‌ನಿ ಉಪಾಧ್ಯಾಯ್‌ ಈ ಅರ್ಜಿ ದಾಖಲಿಸಿದ್ದಾರೆ. ಎಫ್ಐಆರ್‌ನಲ್ಲಿ ಆದ ದೋಷದಿಂದಾಗಿ ವಿಚಾರಣೆಗೆ (Wrongful prosecution) ಒಳಗಾಗುವ ವ್ಯಕ್ತಿಗಳಿಗೆ ಆರ್ಥಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ವೋತ್ಛ ನ್ಯಾಯಾಲಯವು ತನ್ನ ವಿಶೇಷ ಸಾಂವಿಧಾನಿಕ ಅಧಿಕಾರವನ್ನು ಬಳಸಿ ನಿರ್ದಿಷ್ಟ ಮಾರ್ಗಸೂಚಿ ಗಳನ್ನು ನೀಡಬೇಕು. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಆಯೋಗ ನಿರ್ದಿಷ್ಟ ರೂಪರೇಖೆೆ ಸಿದ್ಧಪಡಿಸುವವರೆಗೆ ಕೇಂದ್ರ, ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸ ಬೇಕೆಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಸರಕಾರಕ್ಕೆ ಸೂಚನೆ: ಆಸ್ತಿಯ ಮೇಲಿನ ಒಡೆತನದ ಹಕ್ಕು ಹಾಗೂ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಅನುಭವಿಸುವ ಹಕ್ಕುಗಳಿಗೆ ಸಂಬಂಧಿಸಿದಂತೆ ಎಲ್ಲ ಜಾತಿ-ಧರ್ಮಗಳಿಗೆ ಒಂದೇ ರೀತಿಯ ಕಾನೂನು ಜಾರಿಯಾಗಬೇಕು ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೇಳಿದೆ. ವಕೀಲ ಅಶ್ವಿ‌ನಿ ಉಪಾಧ್ಯಾಯ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಕೇಂದ್ರಕ್ಕೆ ತನ್ನ ಅನಿಸಿಕೆ ಸಲ್ಲಿಸುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next