Advertisement

ಭೂಮಿ ವಾಪಸ್‌ ಪಡೆಯಲು ಆಗ್ರಹ

07:25 PM Oct 20, 2020 | Suhan S |

ತೀರ್ಥಹಳ್ಳಿ: ಎಂಪಿಎಂ ಕಾರ್ಖಾನೆಗೆ ನೀಡಿರುವ ಭೂಮಿ ಮರಳಿ ಸರ್ಕಾರದ ವಶಕ್ಕೆ ಪಡೆಯಲು ಆಗ್ರಹಿಸಿ ತೀರ್ಥಹಳ್ಳಿ ರೈತ ಸಂಘ ಮತ್ತು ಸಮಾನ ಮನಸ್ಕರರು ಮತ್ತು ನಮ್ಮ ಊರಿಗೆ ಅಕೇಶಿಯಾ ಮರ ಬೇಡ ಹೋರಾಟದ ಒಕ್ಕೂಟದವರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

Advertisement

ಪಶ್ಚಿಮ ಘಟ್ಟದ ವ್ಯಾಪ್ತಿಯ ಶಿವಮೊಗ್ಗ ಹಾಗೂ ಇತರ ಜಿಲ್ಲೆಗಳಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಸುಮಾರು ಮೂವತ್ತು ಸಾವಿರ ಹೆಕ್ಟೇರ್‌ ಭೂಮಿಯನ್ನು ಸರ್ಕಾರ ಎಂಪಿಎಂ ಕಾಗದ ಕಾರ್ಖಾನೆಗೆ ಅಕೇಶಿಯಾ ಬೆಳೆಯಲು ಗುತ್ತಿಗೆ ನೀಡಿತ್ತು. ಈಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಎಂಪಿಎಂ ಸಂಸ್ಥೆಯು ಅಕೇಶಿಯಾ ಬೆಳೆದು ನೈಸರ್ಗಿಕವಾಗಿ ಬೆಳೆದ ಕಾಡುಗಳನ್ನು ನಾಶ ಮಾಡಿ ಭೂಮಿಯನ್ನು ಬಂಜರು ಭೂಮಿಯನ್ನಾಗಿ ಮಾಡಿದೆ. ಈಗಾಗಲೇಕಳೆದ ಐದು ವರ್ಷಗಳಿಂದ ಎಂಪಿಎಂ ಸಂಸ್ಥೆಯು ಬೀಗ ಹಾಕಿ ಮುಚ್ಚಲಾಗಿದೆ ಹಾಗೂ ಕಾರ್ಮಿಕರನ್ನು ಬೀದಿಪಾಲು ಮಾಡಲಾಗಿದೆ. ಜೊತೆಯಲ್ಲಿ ಸರ್ಕಾರ ನೀಡಿದ ಭೂಮಿಯಲ್ಲಿ ಗುತ್ತಿಗೆ ಅವಧಿಯು ಸಹ ಕಳೆದ ತಿಂಗಳು ಮುಕ್ತಾಯವಾಗಿದೆ. ಎಂಪಿಎಂ ಕಾಗದ ಕಾರ್ಖಾನೆಯನ್ನು ಖಾಸಗಿಯವರಿಗೆನೀಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ರೈತ ಹೋರಾಟಗಾರ ಕಂಬಳಿಗೆರೆ ರಾಜೇಂದ್ರ ಮಾತನಾಡಿ, ಸರಕಾರವು ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿರುವ ಎಲ್ಲ ಸೂಚನೆ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಧಿಕಾರಿಗಳು, ತಹಶೀಲ್ದಾರ್‌ ಗಳು, ಅರಣ್ಯಾಧಿಕಾರಿಗಳು ಕಚೇರಿಗೆಬರಬೇಕಾದರೆ ಖಾಸಗಿ ಸಂಸ್ಥೆಯವರ ಅನುಮತಿ ಪಡೆಯಬೇಕಾದ ಸ್ಥಿತಿ ಬರಬಹುದೆಂದು ತಿಳಿಸಿದರು. ಮುಂದಿನದಿನಗಳಲ್ಲಿ ಅರಣ್ಯ ಕಚೇರಿಯ ಅಗತ್ಯ ಇಲ್ಲದೆ ಅರಣ್ಯ ನೌಕರರು ಮತ್ತು ಅಧಿಕಾರಿಗಳು ಮನೆಗೆ ಹೋಗಬೇಕಾದ ಸ್ಥಿತಿ ನಮ್ಮ ಮುಂದಿದೆ ಎಂದರು .

ನಮ್ಮೂರಿಗೆ ಅಕೇಶಿಯ ಮರ ಬೇಡ ಹೋರಾಟ ಒಕ್ಕೂಟದ ಸಂಚಾಲಕರಾದ ವಕೀಲರಾದ ಹಿತ್ಲುಗದ್ದೆ ಪ್ರಸನ್ನ ಮನವಿಯನ್ನುಸಲ್ಲಿಸಿದರು. ಪ್ರತಿಭಟನೆಯಲ್ಲಿಕಂಬಳಿಗೆರೆ ರಾಜೇಂದ್ರ, ಕಡಿದಾಳು ದಯಾನಂದ, ಬಾಳೇಹಳ್ಳಿ ಪ್ರಭಾಕರ್‌, ನೆಂಪೆ ದೇವರಾಜ್‌, ಕೊರೋಡಿ ಕೃಷ್ಣಪ್ಪ , ಮೇಗರವಳ್ಳಿ ವೆಂಕಟೇಶ ಹೆಗಡೆ, ನಿಶ್ಚಲ್‌ ಜಾದೂಗಾರ್‌ , ವಕೀಲರಾದ ಶರಶ್ಚಂದ್ರ ,ಹೊರಬೈಲು ರಾಮಕೃಷ್ಣ ,ಎಸ್‌ಐಒ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್‌, ತಾಲೂಕು ಸಂಚಾಲಕ ಮಹಮ್ಮದ್‌, ನವೀನ್‌ ಮಂಡಗದ್ದೆ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next