Advertisement

ಕಟ್ಟಡ ಕಾರ್ಮಿಕರ ಕಾನೂನು ರಕ್ಷಿಸಲು ಆಗ್ರಹ

03:00 PM Aug 11, 2019 | Team Udayavani |

ತುಮಕೂರು: ಕೇಂದ್ರ ಸರ್ಕಾರದ ಉದ್ದೇಶಿತ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ-2018 ಕೈ ಬಿಡಬೇಕು ಹಾಗೂ ಕಟ್ಟಡ ಕಾರ್ಮಿಕರ ಕಾನೂನು 1996 ರಕ್ಷಿಸಬೇಕೆಂದು ಆಗ್ರಹಿಸಿ ಶುಕ್ರವಾರ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಎಐಟಿಯುಸಿ ಮತ್ತು ಸಿಐಟಿಯು ಕಾರ್ಯಕರ್ತರು ಸಮಾವೇಶಗೊಂಡು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.

Advertisement

ಸವಲತ್ತು ಕೇಂದ್ರೀಕರಣ: ಎಐಟಿಯುಸಿ ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್‌ ಮಾತನಾಡಿ, ಕೇಂದ್ರ ಸರ್ಕಾರ ಸುಮಾರು 50 ವರ್ಷಕ್ಕೂ ಹೆಚ್ಚು ಕಾಲ ದಿಂದ ದುಡಿಯುವ ವರ್ಗಕ್ಕೆ ಅನುಕೂಲ ಕಲ್ಪಿಸು ತ್ತಿರುವ 1996ರ ಕಟ್ಟಡ ಕಾರ್ಮಿಕ ಕಾನೂನು ಬದಿ ಗಿರಿಸಿ, ಉದ್ಯಮಿಗಳಿಗೆ ಅನುಕೂಲವಾಗುವ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ ಜಾರಿಗೆ ತರುವ ಮೂಲಕ ಕಾರ್ಮಿಕರ ಸವಲತ್ತುಗಳ ವಿಕೇಂದ್ರೀಕರಣಕ್ಕೆ ಬದಲಾಗಿ ಕೇಂದ್ರೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಗುರುತಿನ ಕಾರ್ಡ್‌ ರದ್ದು: ಕೇಂದ್ರ ಸರ್ಕಾರದ ನಿರ್ಧಾರದಿಂದ ಸುಮಾರು 4 ಕೋಟಿ, ಕರ್ನಾಟಕದ 15 ಲಕ್ಷ ಕಟ್ಟಡ ಕಾರ್ಮಿಕರಿಗೆ ನೀಡಿರುವ ಗುರುತಿನ ಕಾರ್ಡ್‌ ರದ್ದಾಗಲಿದ್ದು, ಸೆಸ್‌ ರೂಪದಲ್ಲಿ ಸಂಗ್ರಹಿಸಿರುವ 70 ಸಾವಿರ ಕೋಟಿ ರೂ. ಉದ್ಯಮಿಗಳ ಪಾಲಾಗಲಿದೆ. ದುಡಿಯುವ ವರ್ಗದ ಹೊಟ್ಟೆ ಮೇಲೆ ಹೊಡೆಯುವ ಇಂತಹ ಕಾನೂನು ಕೂಡಲೇ ಹಿಂಪಡೆಯುವಂತೆ ಮನವಿಯಲ್ಲಿ ಒತ್ತಾಯಿಸಿದರು.

ರಾಜ್ಯದ ಹಿಡಿತ ತಪ್ಪಲಿದೆ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಜಿಲ್ಲಾಧ್ಯಕ್ಷ ಬಿ.ಉಮೇಶ್‌ ಮಾತನಾಡಿ, 6 ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಗೆ ವಿವಿಧ ಸವಲ ತ್ತುಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ನಿಗದಿಪಡಿಸಿ ದಂತೆ ಮಂಡಳಿಗೆ ನೀಡುವ 14 ಸವಲತ್ತು ಪಡೆ ಯಲು ಆರ್ಹರಿದ್ದಾರೆ. ಆದರೆ ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ತರಲು ಉದ್ದೇಶಿಸಿರುವ ಮಸೂದೆಯಿಂದ ರಾಜ್ಯದ ಹಿಡಿತ ಹೋಗಿ, ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಮುಖ ಮಾಡಬೇಕಾಗುತ್ತದೆ ಎಂದರು. ಈ ಮಸೂದೆ ಉದ್ಯಮಿಗಳಿಗೆ ವರ್ಷಕ್ಕೆ ಸಾವಿರಾರು ಕೋಟಿ ರೂ. ಲಾಭ ಮಾಡಿಕೊಡುವ ಮತ್ತೂಂದು ಫ‌ಸಲ್ ಬಿಮಾ ಯೋಜನೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಉದ್ದೇಶಿತ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ-2019ರಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು. ಎಐಟಿಯುಸಿಯ ಸಂಘಟನಾ ಸಂಚಾಲಕ ಶಶಿಕಾಂತ್‌, ಮುಖಂಡರಾದ ಸತ್ಯನಾರಾಯಣ, ದೊಡ್ಡತಿಮ್ಮಯ್ಯ ಗುಬ್ಬಿ, ದೇವರಾಯಪಟ್ಟಣದ ರಂಗನಾಥ್‌, ಸಿಐಟಿಯುನ ಗೌರವಾಧ್ಯಕ್ಷ ಗೋವಿಂದರಾಜು, ಶಂಕರಪ್ಪ, ಲಕ್ಷ್ಮಣ್‌, ಖಲೀಲ್ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next