Advertisement

ವಸತಿ ಯೋಜನೆಯಲ್ಲಿ ಮೀಸಲಾತಿ ನೀಡಲು ಆಗ್ರಹ

05:53 PM Feb 08, 2022 | Team Udayavani |

ಲಿಂಗಸುಗೂರು: ವಿಕಲಚೇತನರ 2016ರ ಕಾಯ್ದೆ ಅನ್ವಯ ವಸತಿ ಯೋಜನೆಗಳಲ್ಲಿ ಶೇ.5ರಷ್ಟು ವಿಕಲಚೇತನರಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಅಂಗವಿಕಲರ ಆರ್‌ಪಿಡಿ ಟಾಸ್ಕ್ ಪೋರ್ಸ್‌ನ ಪದಾಧಿಕಾರಿಗಳು ತಾಪಂ ಇಒಗೆ ಮನವಿ ಸಲ್ಲಿಸಿದರು.

Advertisement

ವಿಕಲಚೇತನರ 2016 ಕಾಯ್ದೆ ಅನ್ವಯ ವಿಕಲಚೇತನರಿಗೆ ಸಮಾನ ಅವಕಾಶ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅದರಂತೆ ಕಾಯ್ದೆಯ ಸೆಕ್ಷನ್‌ 37(ಸಿ) ಅನ್ವಯ ವಸತಿ ಯೋಜನೆಗಳಲ್ಲಿ ಶೇ.5ರಷ್ಟು ಮೀಸಲಾತಿ ನೀಡಬೇಕಾಗಿದೆ. ಬಸವ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಯಲ್ಲಿ ಶೇ.5ರಷ್ಟು ಮೀಸಲಾತಿ ನೀಡುವ ಮುಖಾಂತರ ಬಡ ವಿಕಲಚೇತನರಿಗೆ ಮನೆ ಸೌಲಭ್ಯ ನೀಡಲು ಮುಂದಾಗುವಂತೆ ಆಗ್ರಹಿಸಿದರು.

ಸಮಿತಿ ರಾಜ್ಯ ಕಾರ್ಯದರ್ಶಿ ಸುರೇಶ ಭಂಡಾರಿ, ತಾಲೂಕು ಅಧ್ಯಕ್ಷ ಅಜ್ಮಲ್‌ ಜಮೀನಂದಾರ, ನಿಂಗನಗೌಡ ಮಾಚಕನೂರು ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next