Advertisement

ಹೆಗೆಡೆ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

05:08 PM Jan 22, 2018 | Team Udayavani |

ಸುರಪುರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೇಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ತಾಲೂಕು ಘಟಕದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರವಿವಾರ ತಾಲೂಕಿನ ದೇವಾಪುರ ಕ್ರಾಸ್‌ನ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಒಂದು ಗಂಟೆಗೂ ಅಧಿಕ ಸಮಯ ನಡೆದ ಪ್ರತಿಭಟನೆಯಿಂದ ಸುಮಾರು ಒಂದು ಕಿ.ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. 

Advertisement

ಸಂಚಾರದಲ್ಲಿ ಅವ್ಯವಸ್ಥೆ ಉಂಟಾಗಿ ಪ್ರಯಾಣಿಕರು ಪರದಾಡಿದರು. ಸಚಿವರ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಸಮಿತಿ ತಾಲೂಕು ಸಂಚಾಲಕ ನಿಂಗಣಗೋನಾಲ ಮಾತನಾಡಿ, ಸಚಿವ ಅನಂತಕುಮಾರ ಹೆಗಡೆ ಅವರು ಹೋರಾಟಗಾರರನ್ನು ಬೀದಿ ನಾಯಿಗಳು ಎಂದು ಹಿಯಾಳಿಸಿರು ವುದು ಖಂಡನೀಯವಾಗಿದೆ. ಜವಾಬ್ದಾರಿ ಅರಿವಿರದೆ ನಾಲಗೆ ಹರಿಬಿಡುವ ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. 

ಈ ಹಿಂದೆ ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡಿದ್ದರು. ಈಗ ಹೋರಾಟ ಮಾಡುವ ದಲಿತರನ್ನು ನಾಯಿಗಳಿಗೆ ಹೋಲಿಸಿ ಅವಮಾನಿ ಸಿದ್ದಾರೆ. ಇಂತಹ ಅವಹೇಳನಕಾರಿ ಹೇಳಿಕೆ ನೀಡುವ ಸಚಿವರು ಸಚಿವ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯರಲ್ಲ. ಶೀಘ್ರ ಅವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸಿ ಅವರ ವಿರುದ್ಧ
ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ರಸ್ತೆ ತಡೆ ಕೈ ಬಿಡುವಂತೆ ಮನವೊಸಿದರು. ಪೊಲೀಸರ ಮಧ್ಯಸ್ಥಿಕೆಯಿಂದ ರಸ್ತೆ ತಡೆ ಹಿಂಪಡೆದರು. ಪ್ರಮುಖರಾದ ತಿಪ್ಪಣ್ಣ, ಮಾನಪ್ಪ ಶೆಳ್ಳಗಿ, ಮಹೇಶ ಯಾದಗಿರಿ, ಜೆಟ್ಟೆಪ್ಪ ನಾಗರಾಳ, ಪರಮಣ್ಣ ಹಂದ್ರಾಳ, ಬಸವರಾಜ ಶೆಳ್ಳಗಿ, ದುರ್ಗಪ್ಪ ಹರಳಳ್ಳಿ, ಭೀಮಣ್ಣ ಖ್ಯಾತನಾಳ, ಖಾಜಾಹುಸೇನ, ಮೌನೇಶ ತಿಂಥಣಿ, ಹುಲಗಪ್ಪ ಕುಪಗಲ್‌, ಹಣಮಂತ ಶೆಳ್ಳಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next